ಮಕ್ಕಳಿಗಾಗಿ ಚಿಕಿತ್ಸೆ ನಡುವೆ ದುಬೈಗೆ ಹೊರಟ ಸಂಜಯ್ ದತ್

ಬೆಂಗಳೂರು, ಸೆಪ್ಟೆಂಬರ್ 17, 2020 (www.justkannada.in): ನಟ ಸಂಜಯ್ ದತ್ ಕ್ಯಾನ್ಸರ್ ಚಿಕಿತ್ಸೆಯ ನಡುವೆಯೂ ಪತ್ನಿ ಮಾನ್ಯತಾ ದತ್ ಜೊತೆ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

ಅಂದ್ಹಾಗೆ ಈ ಬಾರಿ ಸಂಜಯ್ ದತ್ ದಿಢೀರ್ ದುಬೈ ಪ್ರವಾಸಕ್ಕೆ ತೆರಳಿರುವುದು ಮಕ್ಕಳಿಗಾಗಿ. ಚಿಕಿತ್ಸೆ ನಡುವೆ ಕೊಂಚ ಸುಧಾರಿಸಿಕೊಂಡಿರುವ ಸಂಜಯ್ ದತ್ ಸಣ್ಣ ಬ್ರೇಕ್ ಪಡೆದು ದುಬೈಗೆ ಹಾರಿದ್ದಾರೆ.

ಸಂಜಯ್ ದತ್ ಇಬ್ಬರು ಮಕ್ಕಳು ದುಬೈನಲ್ಲಿಯೇ ಇದ್ದಾರೆ. ಷಹ್ರಾನ್ ಮತ್ತು ಇಖ್ರಾ ಇಬ್ಬರು ಅವಳಿ ಮಕ್ಕಳು ಕೊರೊನಾ ಲಾಕ್ ಡೌನ್ ಗೂ ಮುಂಚೆ ತಾಯಿ ಮಾನ್ಯತಾ ಜೊತೆ ದುಬೈಗೆ ತೆರಳಿದ್ದರು. ಬಳಿಕ ಲಾಕ್ ಡೌನ್ ಆದ ಕಾರಣ ಅಲ್ಲಿಯೇ ಇರಬೇಕಾಗಿತ್ತು.