ಶಿವಣ್ಣನ ಮನೆಯಲ್ಲಿ ಸೇರಿದ ಸ್ಯಾಂಡಲ್ ವುಡ್ ಟಾಪ್ ಸ್ಟಾರ್ಸ್ !

ಬೆಂಗಳೂರು, ಜುಲೈ 30, 2020 (www.justkannada.in): ಚಿತ್ರ ರಂಗಕ್ಕೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ಮತ್ತು ಚಿತ್ರರಂಗದ ಪುನಶ್ಚೇತನದ ಕುರಿತು ನಟ ಶಿವರಾಜ್ ಕುಮಾರ್ ನಿವಾಸದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಶಿವರಾಜಕುಮಾರ್​, ರವಿಚಂದ್ರನ್​, ಉಪೇಂದ್ರ, ರಮೇಶ್​ ಅರವಿಂದ್​, ಪುನೀತ್​ ರಾಜಕುಮಾರ್​, ಶ್ರೀಮುರಳಿ, ಯಶ್​, ಗಣೇಶ್​, ‘ದುನಿಯಾ’ ವಿಜಯ್​, ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್​, ಜಯಣ್ಣ, ಪುಷ್ಕರ್​ ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ಈ ಕುರಿತು ಟ್ವೀಟ್​ ಮಾಡಿರುವ ಸಿ.ಟಿ. ರವಿ, ‘ಕಿರುತೆರೆ ಮತ್ತು ಚಲನಚಿತ್ರ ಉದ್ಯಮವನ್ನು ಅವಲಂಬಿಸಿರುವ ಕಾರ್ಮಿಕರಿಗೆ ಪ್ಯಾಕೇಜ್ ಹಾಗು ಚಿತ್ರರಂಗದ ಪುನಶ್ಚೇತನದ ನೆರವಿಗಾಗಿ ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರ ಮಂದಿರ ತೆರೆಯಲು ಹಾಗು ದರ ನಿಗದಿ, ತೆರಿಗೆ ವಿನಾಯತಿ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.