ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಕೆ.ವಿ ರಾಜು ನಿಧನ.

ಬೆಂಗಳೂರು,ಡಿಸೆಂಬರ್,24,2021(www.justkannada.in):  ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಕೆ.ವಿ ರಾಜು ನಿಧನರಾಗಿದ್ದಾರೆ.

ಬೆಂಗಳೂರಿನ ರಾಜಾಜಿನಗರದ ನಿವಾಸದಲ್ಲಿ ಬೆಳಗ್ಗೆ 8 ಗಂಟೆ ವೇಳೆ ಕೆ.ವಿ ರಾಜು ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಕಾರಣ ಮನೆಯಲ್ಲಿಯೇ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ಹುಲಿಯಾ, ಬೆಳ್ಳಿ ಮೋಡ, ಇಂದ್ರಜಿತ್, ಬೆಳ್ಳಿ ಕಾಲುಂಗುರ, ಯುದ್ಧಕಾಂಡ ಸೇರಿ ಹಲವು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಚಿತ್ರಕ್ಕೂ ಅವರು ನಿರ್ದೇಶಿಸಿದ್ದರು. ರಾಜಾಜಿನಗರದ ನಿವಾಸದಲ್ಲಿ ರಾಜು ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

Key words: Sandalwood -Senior Director- KV Raju -passes away.