ವಿರಾಟ್ ‘ಕಿರಿಕ್’ಗಳ ಬಗ್ಗೆ ಮಾತನಾಡಿದ ಪಾಕ್ ಕ್ರಿಕೆಟಿಗ!

0
2

ಬೆಂಗಳೂರು, ಡಿಸೆಂಬರ್ 24, 2021 (www.justkannada.in): ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದ್ಯಾನಿಶ್ ಕನೇರಿಯಾ ಅವರು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.

ವಿರಾಟ್ ತಮ್ಮ ಆಟದ ಮೇಲೆ ಗಮನ ಹರಿಸಬೇಕು. ಸೌರವ್‌ ಗಂಗೂಲಿಯಂಥ ಹಿರಿಯರ ವಿರುದ್ಧ ಮಾತನಾಡುವುದು ಆತನಿಗೆ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ ಎಂದಿದ್ದಾರೆ.

ವಿರಾಟ್ ಟೆಸ್ಟ್‌ ಮತ್ತು ಟಿ20ಗಳಲ್ಲಿ ರನ್‌ ಗಳಿಸಲು ಪರದಾಡುತ್ತಿದ್ದಾರೆ. ಒಬ್ಬ ನಾಯಕನಾಗಿ, ಆತ ಐಸಿಸಿಯ ಯಾವುದೇ ಟ್ರೋಫಿ ಗೆದ್ದಿಲ್ಲ, ಆದ್ದರಿಂದ ಎಲ್ಲವೂ ಆತನ ವಿರುದ್ಧ ಹೋಗುತ್ತಿದೆ ಎಂದು ದ್ಯಾನಿಶ್ ಹೇಳಿದ್ದಾರೆ.

ರೋಹಿತ್‌ ಶರ್ಮಾ ಕುರಿತು ಮಾತನಾಡಿರುವ ಅವರು, ಐಪಿಎಲ್‌ನ ಐದು ಟ್ರೋಫಿ ಜಯಿಸಿದ್ದಾರೆ. ನಾಯಕತ್ವ ಚೆನ್ನಾಗಿದೆ, ರಾಹುಲ್ ದ್ರಾವಿಡ್ ಜೊತೆಗೆ ಆತನ ಹೊಂದಾಣಿಕೆ ಚೆನ್ನಾಗಿದೆ.  ದ್ರಾವಿಡ್ ಜೊತೆಗೆ ಸುದೀರ್ಘಕಾಲೀನವಾಗಿ ಒಳ್ಳೆಯ ಬಾಂಧವ್ಯ ಕಾಪಾಡಿಕೊಳ್ಳಬಲ್ಲರು ಎಂದಿದ್ದಾರೆ.