Friday, September 11, 2026

BDA Apartments

Home Cinema ಡಾಲಿಯ ‘ಹೆಡ್ ಬುಷ್’ ಪ್ರಚಾರಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ!

ಡಾಲಿಯ ‘ಹೆಡ್ ಬುಷ್’ ಪ್ರಚಾರಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ!

ಬೆಂಗಳೂರು, ಅಕ್ಟೋಬರ್ 12, 2022 (www.justkannada.in): ಡಾಲಿ ಧನಂಜಯ ಅಭಿನಯದ ಹೆಡ್ ಬುಷ್ ಚಿತ್ರ ಇದೇ ತಿಂಗಳ 21ರಂದು ರಿಲೀಸ್ ಆಗಲಿದೆ.

ಇದೀಗ ಹೆಡ್ ಬುಶ್ ಚಿತ್ರತಂಡ ಬೃಹತ್ ಪ್ರೀ ರಿಲೀಸ್ ಇವೆಂಟ್ ಮಾಡಲು ಸಜ್ಜಾಗಿದೆ. ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದ ಕುರಿತು ಕೆಲ ಮಾಹಿತಿ ಪ್ರಕಟಿಸಿದೆ.

ಹೆಡ್ ಬುಶ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ದಾವಣಗೆರೆಯ ಎಂ ಬಿ ಎಂ ಕಾಲೇಜು ಆವರಣದಲ್ಲಿ ಇದೇ 16ರಂದು ನಡೆಸಲಾಗುತ್ತಿದೆ.

ಧನಂಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ ಹಾಗೂ ಸಂಪೂರ್ಣ ಹೆಡ್ ಬುಷ್ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಭಾಗಿಯಾಗಲಿದ್ದಾರೆ.