‘ಒನ್ ಕಟ್ ಟು ಕಟ್’ ಹೇಳಲು ಸಂಯುಕ್ತಾ ಹೆಗ್ಡೆ !

ಬೆಂಗಳೂರು, ಫೆಬ್ರವರಿ 08, 2021 (www.justkannada.in): ‘ಒನ್ ಕಟ್ ಟು ಕಟ್’ ಹೇಳಲು ರೆಡಿಯಾಗಿದ್ದಾರೆ ನಟಿ ಸಂಯುಕ್ತಾ ಹೊರನಾಡು !

ವಂಶೀಧರ್ ಭೋಗರಾಜು ನಿರ್ದೇಶನದ ದ್ಯಾನಿಶ್ ಸೇಠ್ ನಟನೆಯ  “ಒನ್ ಕಟ್ ಟು ಕಟ್” ಚಿತ್ರಕ್ಕೆ ಸಂಯುಕ್ತಾ ಆಯ್ಕೆಯಾಗಿದ್ದಾರೆ.

ಪಿಆರ್‌ಕೆ ಪ್ರೊಡಕ್ಷನ್ಸ್ ತಯಾರಿಸುತ್ತಿರುವ “ಒನ್ ಕಟ್ ಟು ಕಟ್” ಒಂದು ಕೌಟುಂಬಿಕ ಮನರಂಜನೆ, ಹಾಸ್ಯದ ಕಥಾಹಂದರ ಹೊಂದಿರುವುದು ಪೋಸ್ಟರ್ ನೋಡಿದಾಗಲೇ ಪಕ್ಕಾ ಆಗಿದೆ.

ಇನ್ನು ಹಿರಿಯ ನಟ ಪ್ರಕಾಶ್ ಬೆಳವಾಡಿ, ಸಂಪತ್ ಮಿತ್ರಾ, ರೂಪಾ ರಾಯಪ್ಪ ಕೂಡ ಚಿತ್ರದಲ್ಲಿ ಇರಲಿದ್ದಾರೆ. ನಾಯಕಿಯಾಗಿ ಸಂಯುಕ್ತಾ ಹೊರನಾಡು ಅಭಿನಯಿಸುವುದು ಖಾತ್ರಿಯಾಗಿದೆ.