ನಟ ಸೂರ್ಯಗೆ ಕೊರೊನಾ ಸೋಂಕು ದೃಢ

ಬೆಂಗಳೂರು, ಫೆಬ್ರವರಿ 08, 2021 (www.justkannada.in): ನಟ ಸೂರ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

‘ನಾನು ಕೊರೊನಾಗೆ ತುತ್ತಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ’ ಎಂದು ಸ್ವತಃ ಸೂರ್ಯ ಟ್ವಿಟ್ಟರ್’ನಲ್ಲಿ ಹೇಳಿಕೊಂಡಿದ್ದಾರೆ.

ನಾವಿನ್ನೂ ಕೊರೊನಾ ಸೋಂಕಿನಿಂದ ಹೊರಬಂದಿಲ್ಲ. ಹಾಗೆಂದು ಭಯ ಬೇಡ. ಕೊರೊನಾ ಸೋಂಕದಂತೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿಕೊಂಡರೆ ಸಾಕು ಎಂದು ಸೂರ್ಯ ಹೇಳಿದ್ದಾರೆ.

ಜತೆಗೆ ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.