ಮೈಸೂರು ವಿವಿ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಆಗದಿದ್ದರೇ ಹೋರಾಟ- ಪರಿಷತ್ ಸದಸ್ಯ ಮರಿತಿಬ್ಬೇಗೌಡ ಎಚ್ಚರಿಕೆ.

ಮೈಸೂರು,ಜನವರಿ,17,2023(www.justkannada.in): ಎಲ್ಲಾ ವಿವಿಗಳಲ್ಲಿ ವೇತನ ಪರಿಷ್ಕರಣೆ ಆಗಿರುವ ಹಾಗೆ ಮೈಸೂರು ವಿವಿಯ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಆಗಬೇಕು. ಉನ್ನತ ಶಿಕ್ಷಣ ಸಚಿವರು ಕೂಡಲೇ ಸಭೆ ಕರೆದು ಈ ಸಮಸ್ಯೆ ಬಗೆ ಹರಿಸಬೇಕು. ಇಲ್ಲ ಅಂದರೆ ಮುಂದಿನ ದಿನಗಳಲ್ಲಿ ನಾನೂ ಕೂಡ ಅತಿಥಿ ಉಪನ್ಯಾಸಕರ ಧರಣಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಎಚ್ಚರಿಕೆ ನೀಡಿದರು.

ಮೈಸೂರು ವಿ.ವಿ ಅತಿಥಿ ಉಪನ್ಯಾಸಕರ ನ್ಯಾಯಯುತ ಪರಿಷ್ಕೃತ ವೇತನ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಿಷತ್ ಸದಸ್ಯ ಮರಿತಿಬ್ಬೇಗೌಡ , ಮೈಸೂರು ವಿವಿಗೆ ಸರ್ಕಾರವೇ ಕಳಂಕ ತರುವ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿದೆ. ಯುಜಿಸಿ ಆದೇಶ ಪ್ರಕಾರ ಎಲ್ಲಾ ವಿ.ವಿಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಒಂದು ಪಿರಿಯಡ್ ಗೆ 1500 ರೂ ನಿಗದಿ ಮಾಡಿದೆ. ಮಾಸಿಕ 40 ರಿಂದ 50 ಸಾವಿರ ವೇತನ ನೀಡುತ್ತಿವೆ. ಈಗಾಗಲೇ ರಾಜ್ಯದ ಬೇರೆ ಬೇರೆ ವಿ.ವಿಗಳಲ್ಲಿ ವೇತನ ಪರಿಷ್ಕರಣೆ ಆಗಿದೆ. ಇದು ಯುಜಿಸಿ ಗೈಡ್ ಲೈನ್ಸ್ ಆಧಾರದ ಮೇಲೆ ವೇತನ ಪರಿಷ್ಕರಣೆ ಮಾಡಿವೆ. ಆದರೆ ಮೈಸೂರು ವಿ.ವಿ ತಡವಾಗಿ ಮಾಡಿದೆ. ಸಿಂಡಿಕೇಟ್, ಉಪ ಸಮಿತಿಯ ಆಧಾರ ಮೇಲೆ 24 ಸಾವಿರ ಇದ್ದ ಮಾಸಿಕ ವೇತನ 37 ಸಾವಿರ ಹೆಚ್ಚಳ ಮಾಡಿ ವೇತನ ನೀಡಲು ಪರಿಷ್ಕರಣೆ  ಮಾಡಿದ್ದಾರೆ. ಒಂದು ತಿಂಗಳ ವೇತನ ಪಡೆದ ಮೇಲೆ  ಘೋಷಣೆ ಮಾಡಿದ ವೇತನ ಪರಿಷ್ಕರಣೆಯನ್ನ ವಾಪಸ್ ಪಡೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಂಡಿಕೇಟ್ ಒಪ್ಪಿಗೆ ಇಲ್ಲದೆ ಅವರ ನಿವೃತ್ತಿ ಸಮಯದಲ್ಲಿ ಹಳೇ ಕುಲಪತಿಗಳು ಅಕ್ರಮ ನೇಮಕಾತಿ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ರಾಜ್ಯ ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ‌. ವಿ.ವಿ ಆಡಳಿತ ವರ್ಗ ಕೂಡ ಆರ್ಥಿಕ ಇಲಾಖೆಗೆ ತಪ್ಪು ಮಾಹಿತಿ ನೀಡಿದೆ. ಬೋಧಕೇತರರ ನೇಮಕ, ಅತಿಥಿ ಉಪನ್ಯಾಸಕರ ನೇಮಕಾತಿಯಿಂದ ಹೆಚ್ಚುವರಿಯಾಗಿ 2.8 ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದೆ. ಇವರು 4 ಕೋಟಿ ಹೆಚ್ಚುವರಿಯಾಗಲಿದೆ ಎಂದು ತಪ್ಪು ಮಾಹಿತಿ ನೀಡುತ್ತದೆ.

ರಾಜ್ಯದ ಎಲ್ಲಾ ವಿ.ವಿ ಗಳಲ್ಲಿ ಸಾಕಷ್ಟು ಬ್ಯಾಕ್ ಲಾಗ್ ಹುದ್ಧೆಗಳು ಖಾಲಿ ಇವೆ. ಇದರ ಜೊತೆ ಶೇ.60 ಖಾಯಂ ಹುದ್ದೆಗಳು ಖಾಲಿ ಇವೆ. ಅತಿಥಿ ಉಪನ್ಯಾಸಕರು ಮೈಸೂರು ವಿ.ವಿಯಲ್ಲಿ ಸುಮಾರು 900 ಜನ ಕೆಲಸ ಮಾಡುತಿದ್ದಾರೆ. ಈ ಅತಿಥಿ ಉಪನ್ಯಾಸಕರು ಇಲ್ಲದಿದ್ದರೆ ವಿವಿಗೆ ಬೀಗ ಹಾಕಬೇಕಾಗುತ್ತದೆ ಎಂದು ಹೇಳಿದರು.

ಮೈಸೂರು ವಿವಿಗೆ ವಾರ್ಷಿಕ ಸುಮಾರು 86 ಕೋಟಿ ಆಂತರಿಕ ಸಂಪನ್ಮೂಲಗಳಿಂದ ಬರುತ್ತದೆ. ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರ ಕುರಿತು ಭಾರಿ ಚರ್ಚೆ ಮಾಡಿದೆ. ಉನ್ನತ ಶಿಕ್ಷಣ ಸಚಿವರು ಮೈಸೂವಿವಿ ಬಗ್ಗೆ ದೊಡ್ಡ ಉದಾಸೀನ ತೋರುತ್ತಿದ್ದಾರೆ. ಮೈಸೂರು ಮಹಾರಾಣಿ ಕಾಲೇಜು ಕುಸಿದು ಬಿದ್ದು ಮೂರು ತಿಂಗಳು ಕಳೆಯಿತು ಯಾರು ಗಮನ ಹರಿಸುತ್ತಿಲ್ಲ. ಇದರ ಬಗ್ಗೆ ನಾನು ಎಷ್ಟೋ ಬಾರಿ ಆಗ್ರಹ ಮಾಡಿದ್ದೇನೆ. ಶಿಕ್ಷಣ ಸಚಿವರು ಮೈಸೂರಿಗೆ ಎಷ್ಟೋ ಬಾರಿ ಬಂದಿದ್ದರೂ ಇತ್ತ ಗಮನ ಹರಿಸಿಲ್ಲ. ಮೈಸೂರು ವಿ.ವಿ ಬಗ್ಗೆ ಇವರಿಗೆ ಒಂದು ರೀತಿ ಉದಾಸೀನತೆ ಇದೆ. ರಾಜ್ಯದ ಬೇರೆ ಎಲ್ಲಾ ವಿವಿಗಳಲ್ಲೂ ಅತಿಥಿ ಉಪನ್ಯಾಸಕರಿಗೆ ವೇತನ ಪರಿಷ್ಕರಣೆ ಆಗಿದೆ. ಇಲ್ಲಿ ಮಾಡಲು ಯಾಕೆ ಮೀನಾಮೇಷ ತೋರುಸಿತ್ತೀರಾ.? ಎಂದು ಮರಿತಿಬ್ಬೇಗೌಡ ಪ್ರಶ್ನಿಸಿದರು.

Key words:  salary -guest lecturers – Mysore University-MLC-Marithibbe Gowda