Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಸಚಿವ ಸಂಪುಟದಿಂದ ಜಮೀರ್ ಅಹ್ಮದ್ ಖಾನ್ ವಜಾಗೊಳಿಸಲು  ಸಾ.ರಾ ಮಹೇಶ್  ಆಗ್ರಹ

ಸಚಿವ ಸಂಪುಟದಿಂದ ಜಮೀರ್ ಅಹ್ಮದ್ ಖಾನ್ ವಜಾಗೊಳಿಸಲು  ಸಾ.ರಾ ಮಹೇಶ್  ಆಗ್ರಹ

ಮೈಸೂರು,ನವೆಂಬರ್,12,2024 (www.justkannada.in): ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಕರಿಯ ಎಂದು ನಿಂದನೆ ಮಾಡಿದ  ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ಮಾಜಿ ಸಚಿವ ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಸಾ.ರಾ ಮಹೇಶ್,  ಸಚಿವ ಸಂಪುಟದಿಂದ ಜಮೀರ್ ಅಹ್ಮದ್ ಖಾನ್ ರನ್ನು ವಜಾಗೊಳಿಸಲು ಆಗ್ರಹಿಸಿದರು.

ಕುಮಾರಸ್ವಾಮಿ ಅವರು ನಿಮಗೆ ಅವಕಾಶ ಕೊಟ್ಟಿದ್ದಾಗ ಕುಮಾರಣ್ಣ ಅವರ ಬಣ್ಣ ಗೊತ್ತಾಗಲಿಲ್ವಾ.? ಮೆಕ್ಕಾ ಹೋಗುವಾಗ ನಿಮ್ಮ ತಾಯಿ ಆಶೀರ್ವಾದ ಪಡೆಯುವುದರ ಜೊತೆಗೆ ಕುಮಾರಣ್ಣನ ಅವರ ಕಾಲಿಗೆ ಬಿದ್ದು ಹೋದರಲ್ಲ ಆವಾಗ  ಅವರ ಬಣ್ಣ ಗೊತ್ತಿರಲಿಲ್ಲಾ.? ಬಣ್ಣ ತಂದೆ ತಾಯಿಯಿಂದ ಬರುವ ಬಳುವಳಿ. ನಾವೆಲ್ಲರೂ ಪೂಜಿಸುವ ದೇವರು ವಿಷ್ಣು, ಕೃಷ್ಣ, ರಾಮ ಎಲ್ಲರೂ ಕಪ್ಪು ಬಣ್ಣ. ನಾವೆಲ್ಲರೂ ಮೂಲತಃ ದ್ರಾವಿಡರು. ಪ್ರದಾನಿಯಾಗಿ ದೇವೇಗೌಡರು ಒಂದು ಕಪ್ಪು ಚುಕ್ಕಿ ಇಲ್ಲದೆ ಆಡಳಿತ ಮಾಡಿದರು. ನಿಮ್ಮ ಮೆಕ್ಕಾ ಮದಿನದಲ್ಲಿರುವ ಕಾಬ ಬಣ್ಣ ಯಾವುದು.? ಎಂದು ಕಿಡಿಕಾರಿದರು.

ಕುಮಾರಣ್ಣನ ಅವರನ್ನ ಪರ್ಚೆಸ್ ಮಾಡುತ್ತೇನೆ ಅಂತೀರಾ. ಇದಾ ನಿಮ್ಮ ಸಂಸ್ಕಾರ .? ನೀವು ದೇವೇಗೌಡರ ಕಾಲಿನ ಧೂಳಿಗೂ ಸಮಾನರಲ್ಲ. ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿ ಮಾತನಾಡಬೇಡಿ. ಜಮೀರ್ ಈ ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ರಾಜ್ಯ ಸರ್ಕಾರ ನೈತಿಕತೆ ಇದ್ದರೆ ಸಚಿವ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು. ಜಮೀರ್ ಅಹ್ಮದ್ ಖಾನ್ ಅವರು ದೇವೇಗೌಡರ, ಕುಮಾರಸ್ವಾಮಿ ಅವರ ಬಗ್ಗೆ ಇಂದು ಮಾತನಾಡಿರಬಹುದು ಮುಂದೆ ನಿಮಗೂ ಈ ಗತಿ ಬರಬಹುದು. ಏನು ಪಾಳೆಗಾರಿಕೆ ಮಾಡುತ್ತೀರಾ.? ಎಂದು ಹರಿಹಾಯ್ದರು.

Key words: Sa ra Mahesh, demands, dismiss, Jameer Ahmed Khan, cabinet