Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಅಣ್ಣನ ವಿರುದ್ದವೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣಗೆ ಪರೋಕ್ಷವಾಗಿ ದೂರು ನೀಡಿದ ಸಹೋದರ ಸಾ.ರಾ...

ಅಣ್ಣನ ವಿರುದ್ದವೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣಗೆ ಪರೋಕ್ಷವಾಗಿ ದೂರು ನೀಡಿದ ಸಹೋದರ ಸಾ.ರಾ ನಂದೀಶ್…

ಮೈಸೂರು,ಜ,3,2020(www.justkannada.in): ಅಣ್ಣ  ಸಾ.ರಾ ಮಹೇಶ್  ವಿರುದ್ಧವೇ ಸಹೋದರ ಸಾ.ರಾ ನಂದೀಶ್  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣಗೆ  ಪರೋಕ್ಷವಾಗಿ ದೂರು ನೀಡಿದ್ದಾರೆ.

ಕೆ.ಆರ್.ನಗರ ತಾಲ್ಲೂಕು ಮಿರ್ಲೆ ಕ್ಷೇತ್ರದ ಜಿಪಂ ಸದಸ್ಯರಾಗಿರುವ ಸಾ.ರಾ ನಂದೀಶ್  ಅಣ್ಣ ಶಾಸಕ‌ ಸಾ.ರಾ.ಮಹೇಶ್ ವಿರುದ್ದ ಹೆಸರೇಳದೆ ಪರೋಕ್ಷವಾಗಿ ಸಚಿವ ವಿ.ಸೋಮಣ್ಣಗೆ ದೂರು ನೀಡಿದ್ದಾರೆ.  ಕ್ಷೇತ್ರದಲ್ಲಿ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳಿಗೆ ಏನು ಸೌಲಭ್ಯ ಸಿಗುತ್ತಿಲ್ಲ. ಆದರೆ‌ ಶಾಸಕರ ಹಿಂಬಾಲಕರಿಗೆ ಸೌಲಭ್ಯ ಸಿಗುತ್ತಿದೆ. ನಿಜವಾದ ಫಲಾನುಭವಿಗಳು ಅರ್ಜಿ ಸಲ್ಲಿಸಿದರೂ ಯಾವುದೇ ಸೌಲಭ್ಯ ಇಲ್ಲ. ಈ ಬಗ್ಗೆ ಗಮನವಹಿಸುವಂತೆ ಸಚಿವ ಸೋಮಣ್ಣರಿಗೆ ಸಾ.ರಾ.ನಂದೀಶ್ ಮನವಿ ಮಾಡಿದ್ದಾರೆ.

ಇತ್ತ ಸರ್ಕಾರ ಅನುದಾನ ತಡೆ ಹಿಡಿದಿದೆ ಎಂದು ಶಾಸಕ ಸಾ.ರಾ.ಮಹೇಶ್ ಸಭೆಗೆ ಗೈರಾದರೇ,  ಅದೇ ಸಭೆಯಲ್ಲಿ ಅಣ್ಣನ ವಿರುದ್ಧವೇ ಉಸ್ತುವಾರಿ ಸಚಿವರಿಗೆ ತಮ್ಮ ಸಾ.ರಾ ನಂದೀಶ್ ದೂರು ಹೇಳಿದ್ದಾರೆ.

key words: sa.ra mahesh- : brother –sa.ra nandish- complained-minister- v. Somanna