Sunday, August 23, 2026

BDA Apartments

Home Front Page ಸಾ.ರಾ.ಮಹೇಶ್ ಹೇಳಿದ್ದನ್ನೆಲ್ಲ ಕೇಳಲು ನಾನು ಕೋಲೆ ಬಸವನಲ್ಲ : ಎಚ್.ಡಿ.ಕೆ

ಸಾ.ರಾ.ಮಹೇಶ್ ಹೇಳಿದ್ದನ್ನೆಲ್ಲ ಕೇಳಲು ನಾನು ಕೋಲೆ ಬಸವನಲ್ಲ : ಎಚ್.ಡಿ.ಕೆ

ಮೈಸೂರು,ಮಾರ್ಚ್,14,2021 (www.justkannada.in) : ಶಾಸಕ ಜಿಟಿ.ದೇವೇಗೌಡರನ್ನು ಮತ್ತೆ ಪಕ್ಷಕ್ಕೆ ಕರೆದುಕೊಳ್ಳಲ್ಲ. ಹಳೆಯ ತಪ್ಪು ಮತ್ತೆ ಮರುಕಳಿಸುವಂತೆ ಮಾಡಲ್ಲ. ಹೆಚ್‌.ಡಿ.ದೇವೇಗೌಡರಿಗೆ ಜಿಟಿಡಿ ವಿಚಾರವನ್ನು ಸ್ಪಷ್ಟವಾಗಿ ಹೇಳುತ್ತೇನೆ. ಇಲ್ಲಿ ಕ್ಷಮೆ ನೀಡುವ ಪ್ರಮೇಯವೇ ಇಲ್ಲ ಎಂದು ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಆಕ್ರೋಶವ್ಯಕ್ತಪಡಿಸಿದ್ದಾರೆ.

jk

ಜಿ.ಟಿ.ದೇವೇಗೌಡ ದೊಡ್ಡ ಆಲದ ಮರ ಎಂದು ಹೇಳಿಕೊಂಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ನನ್ನನ್ನ ಯಾರು ಅಲುಗಾಡಿಸಲು ಸಾಧ್ಯವಿಲ್ಲ ಅಂತಿದ್ದಾರೆ. ಹೆಚ್‌.ಡಿ.ದೇವೇಗೌಡರಿಗೆ ಅವರ ಮೇಲೆ ಸಾಫ್ಟ್ ಕಾರ್ನರ್ ಇತ್ತು. ಅವರಿಗೆ ಸಾಕಷ್ಟು ಜನ ತಪ್ಪು ಸಂದೇಶ ನೀಡುತ್ತಿದ್ದಾರೆ. ಈ ಬಾರಿ ನಾನು ಜಿಟಿಡಿ ವಿಚಾರವನ್ನು ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ ಎಂದಿದ್ದಾರೆ.

ಹೌದು ನನಗೆ ಸಹಕಾರ ಕ್ಷೇತ್ರ ಗೊತ್ತಿಲ್ಲ

ಹೌದು ನನಗೆ ಸಹಕಾರ ಕ್ಷೇತ್ರ ಗೊತ್ತಿಲ್ಲ. ಆದರೆ, ನಾನು ಈ ಬಾರಿ ಚುನಾವಣೆಯಲ್ಲಿ ಯಶಸ್ಸು ಗಳುಸುವ ವಿಶ್ವಾಸವಿದೆ. ಕಾರ್ಯಕರ್ತರಿಗಾಗಿ, ಪಕ್ಷ ಉಳಿಸಿಕೊಳ್ಳಲು ನಾನು ಚುನಾವಣೆಗೆ ದುಮುಕಿದ್ದೇನೆ ಎಂದರು.

ಜಿಟಿಡಿ ವಿರುದ್ಧ ಕುಮಾರಸ್ವಾಮಿ ಅಸಮಾಧಾನ

sa.ra.Mahesh-All-said-Listen-am-Colebasava-not-HDK

2006ರಲ್ಲೇ ನಾವು ಬುದ್ದಿ ಕಲಿಯಬೇಕಿತ್ತು. ಆಗಲೇ ನಾನು ಚುನಾವಣೆಯಲ್ಲಿ ಗೆಲ್ಲುತ್ತಿದ್ದೆ. ಕೆ.ಮಹದೇವ್ ಸೇರಿದಂತೆ ಯಾರನ್ನು ಕಡೆಗಣಿಸಿಲ್ಲ. ಸಾ.ರಾ.ಮಹೇಶ್ ಹೇಳಿದ್ದನೆಲ್ಲ ಕೇಳಲು ನಾನು ಕೋಲೆ ಬಸವ ಅಲ್ಲ ಎಂದು ಜಿಟಿಡಿ ವಿರುದ್ಧ ಕುಮಾರಸ್ವಾಮಿ ಅಸಮಾಧಾನವ್ಯಕ್ತಪಡಿಸಿದ್ದಾರೆ.

key words : sa.ra.Mahesh-All-said-Listen-am-Colebasava-not-HDK