ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ದಾಳಿ: ಕುಡಿಯಲು ನೀರು ಸಿಗದೆ6 ವರ್ಷದ ಬಾಲಕಿ ಸಾವು.

ಕೀವ್,ಮಾರ್ಚ್,9,2022(www.justkannada.in):   ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆಸಿದ್ದು,  ಉಕ್ರೇನ್​ನಲ್ಲಿ ಯುದ್ಧ ಭೀಕರತೆ ಹೆಚ್ಚುತ್ತಿದೆ. ಈ ಮಧ್ಯೆ ಮೂಲಭೂತ ಸೌಕರ್ಯಗಳು ಸಿಗದೆ 6 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ.

ತಾನಿಯಾ 6 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಮರಿಯುಪೋಲ್​​ನಲ್ಲಿ ಆರು ವರ್ಷದ ಬಾಲಕಿ ತಾನಿಯಾ ಕುಡಿಯಲು ನೀರು ಸಿಗದೆ, ಡಿಹೈಡ್ರೇಶನ್​​ಗೆ ಒಳಗಾಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಇದಕ್ಕೂ ರಷ್ಯಾ ಸೇನೆ, ಅದು ನಡೆಸುತ್ತಿರುವ ದಾಳಿಯೇ ಕಾರಣ ಎಂದು ಉಕ್ರೇನ್​ ಆಡಳಿತ ಹೇಳಿದೆ.

ರಷ್ಯಾದ ಆಕ್ರಮಣ ತೀವ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಮರಿಯುಪೋಲ್​ ಕೂಡ ಒಂದು. ಅಲ್ಲಿನ ಕಟ್ಟಡವೊಂದರ ಮೇಲೆ ರಷ್ಯಾ ದಾಳಿ ನಡೆಸಿತ್ತು. ಆಗ ಈ ಪುಟ್ಟ ಬಾಲಕಿಯ ಅಮ್ಮ ಮೃತಪಟ್ಟಿದ್ದಾರೆ. ಅಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದ ಹುಡುಗಿ, ಡಿಹೈಡ್ರೇಶನ್​​ನಿಂದ ಸಾವನ್ನಪ್ಪಿದ್ದಾಳೆ ಎಂದು ಉಕ್ರೇನ್​ ಆರೋಪಿಸಿದೆ.

key words: Russian-attack –Ukraine- Death – girl