ನಮ್ಮ ನಾಯಕರು ಎಲ್ಲವನ್ನೂ ಗಮನಿಸಿದ್ದಾರೆ: ಹಿರಿಯರನ್ನ ಕೈಬಿಡ್ತಾರೆ  ಅನ್ನೋದು ಗಾಳಿಸುದ್ದಿ- ಸಚಿವ ಗೋವಿಂದ ಕಾರಜೋಳ.

ಬಾಗಲಕೋಟೆ,ಡಿಸೆಂಬರ್,9,2022(www.justkannada.in):  ಗುಜರಾತ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿ ಮತ್ತೆ ಅಧಿಕಾರದ ಗದ್ದುಗೆಗೇರಿದ್ದು ಚುನಾವಣೆಯಲ್ಲಿ ಯುವಕರಿಗೆ ಮಣೆ ಹಾಕಿದ್ದೇ ಬಿಜೆಪಿಗೆ ವರವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಹಿರಿಯರಿಗೆ ಕೋಕ್ ಕೊಟ್ಟು ಯುವಕರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,  ನಮ್ಮ ನಾಯಕರು  ಎಲ್ಲವನ್ನೂ ಗಮನಿಸುತ್ತಿದ್ದಾರೆ. ಹಿರಿಯರನ್ನ ಕೈಬಿಡ್ತಾರೆ ಅನ್ನೋದು ಗಾಳಿಸುದ್ದಿ. ಹಿರಿಯರನ್ನ ಕೈಬಿಡಲ್ಲ. ಅಂತಹ ಯಾವುದೇ ಪ್ರಕ್ರಿಯೆ ನಮ್ಮಲ್ಲಿ ನಡೆದಿಲ್ಲ. ಬದಲಾವಣೆ ಮಾಡುವ ಅನಿವಾರ್ಯತೆ ಬಂದರೇ. ಬದಲಾವಣೆ ಮಾಡುತ್ತಾರೆ ಎಂದಿದ್ದಾರೆ.

Key words: rumored – elders- will be –abandoned- Minister -Govinda Karajola.