ಚಿತ್ತಾಪುರದಲ್ಲಿ ನ.೧೬ರಂದು RSS ಪಥಸಂಚಲನಕ್ಕೆ ಕೋರ್ಟ್‌  ಅನುಮತಿ : @ಕಂಡಿಷನ್ಸ್‌ ಅಪ್ಲೈ

The High Court has allowed a procession to be held in Chittapur in Kalaburagi district on Monday, November 16, to mark the 100th anniversary of the Rashtriya Swayamsevak Sangh (RSS). The bench also said in its order that it is allowing a procession with 300 RSS members and 50 musicians.

 

ಬೆಂಗಳೂರು, ನ.೧೩,೨೦೨೫ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ೧೦೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್‌ ೧೬ರ ಸೋಮವಾರದಂತೆ ಪಥ ಸಂಚಲನ ನಡೆಸುವುದಕ್ಕೆ ಹೈಕೋರ್ಟ್‌ ಅನುಮತಿ ನೀಡಿದೆ.

ಅಲ್ಲದೆ, ೩೦೦ ಮಂದಿ  ಆರ್‌ಎಸ್‌ಎಸ್‌ ಸದಸ್ಯರು ಮತ್ತು ೫೦ ಮಂದಿ ವಾದ್ಯಗಾರರೊಂದಿಗೆ ಪಥ ಸಂಚಲನ ನಡೆಸುವುದಕ್ಕೆ ಅನುಮತಿ ನೀಡುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ಜಿಲ್ಲಾಡಳಿತ ಕ್ರಮ ಪ್ರಶ್ನಿಸಿ, ಆರ್ಎಸ್ಎಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಕಲಬುರಗಿಯ ನ್ಯಾಯಪೀಠ, ಪಥ ಸಂಚಲನಕ್ಕೆ ತಹಶೀಲ್ದಾರರ ಅವರು ನೀಡಿರುವ ಅನುಮತಿಯನ್ನು ಪರಿಗಣಿಸಿ ಈ ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಅಲ್ಲದೆ, ೨೦೧೫ರ ಅಕ್ಟೋಬರ್ ೧೮ರಂದು ರಾಜ್ಯ ಸರ್ಕಾರವು, ಉದ್ಯಾನ, ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ೧೦ಕ್ಕೂ ಹೆಚ್ಚು ಮಂದಿ  ಶಾತಿಯುತ ನಾಗರಿಕ, ಸಾಮಾಜಿಕ ಅಥಾವ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸರ್ಕಾರದ ಅನುಮತಿ ಕಡ್ಡಾಯಗೊಳಿಸಿ ಹೊರಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪಥಸಂಚಲನದಲ್ಲಿ ೩೦೦ ಮಂದಿ ಮತ್ತು ವಾದ್ಯಗೋಷ್ಟಿಯಲ್ಲಿ ೨೫ ಮಂದಿಗೆ  ಸೀಮಿತಗೊಳಿಸಲಾಗಿದೆ. ಆದ್ದರಿಂದ ಪಥಸಂಚಲನಕ್ಕೆ ೬೦೦ ಮಂದಿ ಮತ್ತು ವಾದ್ಯಗೋಷ್ಠಿಯಲ್ಲಿ ೫೦ ಮಂದಿಗೆ ಅವಕಾಶ ನೀಡಬೇಕು. ಅಲ್ಲದೆ, ಸಂಘಕ್ಕೆ ೧೦೦ ವರ್ಷ ಪೂರೈಸಿರುವ ವಿಶೇಷ ಸಂದರ್ಭದಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿದೆ. ಜನರ ಭಾವನೆಗಳನ್ನು ಪರಿಗಣಿಸಿ ಒಂದು ಅವಧಿಗಾಗಿ ಈ ಮನವಿ ಮಾಡಲಾಗುತ್ತಿದ್ದೇವೆ ಎಂದುಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಆರ್‌ಎಸ್‌ಎಸ್‌ ಈ ಹಿಂದೆ ನಡೆಸಿರುವ ಪಥಸಂಚಲನದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಪರಿಗಣಿಸಿ ತಹಶೀಲ್ದಾರ್‌ ಅವರು ಅನುಮತಿ ನೀಡಿದ್ದಾರೆ ಎಂದರು.

ವಾದ ಆಲಿಸಿದ ಪೀಠ, ತಹಶೀಲ್ದಾರರ ಅವರು ಅನುಮತಿ ನೀಡಿರುವ ಷರತ್ತಿನಲ್ಲಿ ಬದಲಾವಣೆ ಮಾಡಿ ಪಥಸಂಚಲನದಲ್ಲಿ ೫೦ ಮಂದಿ ವ್ಯಾದ್ಯಗಾರರ ತಂಡ ಭಾಗವಹಿಸಲು ಅವಕಾಶ ಕಲ್ಪಿಸಿ ಅನುಮತಿ ನೀಡುವುದಾಗಿ ಆದೇಶಿಸಿತು.

key words: Court allows, RSS procession, Chittapur, Nov. 16, Conditions apply

SUMMARY: 

Court allows RSS procession in Chittapur on Nov. 16: @Conditions apply

The High Court has allowed a procession to be held in Chittapur in Kalaburagi district on Monday, November 16, to mark the 100th anniversary of the Rashtriya Swayamsevak Sangh (RSS). The bench also said in its order that it is allowing a procession with 300 RSS members and 50 musicians.