ಅಂಬರೀಶ್ ಸ್ಮಾರಕ‌ ನಿರ್ಮಾಣಕ್ಕೆ 12 ಕೋಟಿ ರೂ.  ಅನುದಾನ: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ.

ಬೆಂಗಳೂರು,ಜನವರಿ,6,2022(www.justkannada.in):  ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನ ಕೈಗೊಳ್ಳಲಾಗಿದೆ.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಜೆ.ಸಿ ಮಾಧುಸ್ವಾಮಿ, ನಟ ದಿ. ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ಅನುದಾನ, ಕಂಠೀರವ ಸ್ಟೂಡಿಯೋದಲ್ಲೇ ಅಂಬಿ ಸ್ಮಾರಕ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.  300 ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿಗೆ 300 ರೂ ನೀಡಲು ತೀರ್ಮಾನಿಸಲಾಗಿದೆ ಎಂದರು.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಈ ಕೆಳಕಂಡಂತಿವೆ.

ಅಂಬರೀಷ್ ಸ್ಮಾರಕ‌ ನಿರ್ಮಿಸಲು 12 ಕೋಟಿ ರೂ.  ಅನುದಾನ.

ಬೆಂಗಳೂರು ಜಿಲ್ಲೆಯ ಪೂರ್ವ ತಾಲೂಕು ಹೊಸಕೋಟೆ ಕೆರೆಗೆ ನೀರು ತುಂಬಿಸಲು ಅನುದಾನ. ಕೆ.ಆರ್. ಪುರಂ ತ್ಯಾಜ್ಯ ನೀರು ಸಂಸ್ಕರಿಸಿ 22 ಕೆರೆಗೆ ನೀರು ಹರಿಸುವುದು.

ಬೆಂಗಳೂರು ನಗರಕ್ಕೆ ಅಮೃತ ಯೋಜನೆಯಡಿ 6 ಸಾವಿರ ಕೋಟಿ ರೂ. ಖರ್ಚು ಮಾಡಲು ಸಂಪುಟ ಅನುದಾನ.

ಕಾರ್ಕಳದ ನ್ಯಾಯಾಲಯಕ್ಕೆ 19 ಕೋಟಿ ರೂ. ಮಂಜೂರು. ಮುಳುಬಾಗಿಲು ಕೋರ್ಟ್​ಗೆ 16 ಕೋಟಿ ರೂ.

ಹಿರೀಸಾವೆ ಬಳಿ ಆದಿ ಚುಂಚನಗಿರಿ ಮಠಕ್ಕೆ ಇಪ್ಪತ್ತೆರಡು ಎಕರೆ ಜಾಗ. ಶಾಲೆ, ವಿದ್ಯಾರ್ಥಿ‌ನಿಲಯ, ಧ್ಯಾನ‌ಮಂದಿರ, ಅನಾಥಾಶ್ರಮ, ಇತರೆ ಕಲ್ಯಾಣ ಕಾರ್ಯಕ್ಕೆ ಬಳಸಿಕೊಳ್ಳಬೇಕು.

ನೋಂದಣಿ ಮುದ್ರಾಂಕ ಇಲಾಖೆಗೆ ಐಟಿ ಉಪಕರಣ ಖರೀದಿ ನಿರ್ವಹಣೆಗೆ ಮಾನ ಸಂಪನ್ಮೂಲ ಪೂರೈಕೆ ಮಾಡಲು 406 ಕೋಟಿ ರೂ. ಅನುದಾನ.

ಉಡುಪಿ ಕಾಪು ಜನಾರ್ಧನ ದೇವಾಲಯದ ಹತ್ತು ಸೆಂಟ್ ಜಾಗ ಭಂಟರ ಸಂಘಕ್ಕೆ. ರಾಜಘಟ್ಟದಲ್ಲಿ ಶಿಕ್ಷಣ ಸಂಸ್ಥೆಗೆ ನೀಡಿದ್ದ ಜಾಗಕ್ಕೆ ಮಾರ್ಗಸೂಚಿ ದರಕ್ಕೆ ರಿಯಾಯಿತಿ.

ಜೆಜೆಎಂ ಅಡಿ ಎಲ್ಲ‌ ಮನೆಗೆ ನೀರು ಕೊಡಲು ರಾಜ್ಯದ ಕಾಂಟ್ರಿಬ್ಯೂಷನ್​ಗಾಗಿ ವಿಶ್ವ ಬ್ಯಾಂಕ್​ನಲ್ಲಿ‌ ಲೋನ್ ಪಡೆಯಲು ಅನುಮತಿ.
ಆಯುಷ್ ಶುಶ್ರೂಷಕರ 80 ಹುದ್ದೆಗೆ ನೇರ ನೇಮಕ. ಗುತ್ತಿಗೆ ನೌಕರರಿಗೆ ವರ್ಷಕ್ಕೆ ಎರಡು ಕೃಪಾಂಕ ಕೊಡಲು ನಿರ್ಧಾರ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನಗರೋತ್ಥಾನ ಯೋಜನೆಯಿಂದ 5 ವರ್ಷಕ್ಕೆ ಒಟ್ಟು 3885 ಕೋಟಿ ರೂ. ಕೊಡುವುದು.

Key words: Rs.12 crore – Ambarish-Monument- Grants– State –Cabinet- meeting.