Saturday, August 8, 2026

BDA Apartments

Home Front Page ಕಾಂಗ್ರೆಸ್ ಶಾಸಕರೆಲ್ಲಾ ನಿರುದ್ಯೋಗಿಗಳು ಎಂದ ಬಿಜೆಪಿ ಅಭ್ಯರ್ಥಿ ಮುನಿರತ್ನ…

ಕಾಂಗ್ರೆಸ್ ಶಾಸಕರೆಲ್ಲಾ ನಿರುದ್ಯೋಗಿಗಳು ಎಂದ ಬಿಜೆಪಿ ಅಭ್ಯರ್ಥಿ ಮುನಿರತ್ನ…

ಬೆಂಗಳೂರು,ಅಕ್ಟೋಬರ್,23,2020(www.justkannada.in):  ರಾಜರಾಜೇಶ್ವರಿನಗರ ಉಪ ಚುನಾವಣಾ ಕಣ ರಂಗೇರಿದ್ದು ಆಡಳಿತ ಪಕ್ಷದ ನಾಯಕರು ಮತ್ತು ವಿಪಕ್ಷದ ನಾಯಕರ ನಡುವೆ ಆರೋಪ, ಪ್ರತ್ಯಾರೋಪ, ವಾದ, ವಾಗ್ವಾದ ಮುಂದುವರೆದಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರನ್ನ ನಿರುದ್ಯೋಗಿಗಳು ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಲೇವಡಿ ಮಾಡಿದ್ದಾರೆ.jk-logo-justkannada-logo

ಬೆಂಗಳೂರಿನಲ್ಲಿ ಇಂದು ಮಾತನಾಡಿರುವ ಮುನಿರತ್ನ, ಕಾಂಗ್ರೆಸ್ ನಲ್ಲಿ ಈಗ 65 ಶಾಸಕರಿದ್ದಾರೆ. ಕಾಂಗ್ರೆಸ್ ಶಾಸಕರೆಲ್ಲಾ ನಿರುದ್ಯೋಗಿಗಳು, ಅವರಿಗೆಲ್ಲಾ ಉದ್ಯೋಗವೇ ಇಲ್ಲ. ಅವರಿಗೆ ಮಾಡಲು ಕೆಲಸ ಇಲ್ಲ. ಹೀಗಾಗಿ ಅವರದ್ದೇ ಒಂದು ಸಂಘ ಕಟ್ಟಿಕೊಂಡು ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.rr-nagar-bjp-candidate-muniratna-says-all-congress-mlas-unemployed

ಏಳೇಳು ಜನ್ಮದಲ್ಲೂ ಡಿಕೆಶಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ- ವ್ಯಂಗ್ಯ…

ಯುದ್ಧದಲ್ಲಿ ಎದುರಾಳಿ ಸರಿಸಮ ಇದ್ರೆ ಹೊರಾಡಬಹುದೆಂದು ಹೇಳಿಕೆ ನೀಡುವ ಮೂಲಕ ತಮ್ಮನ್ನ ಟೀಕಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಮುನಿರತ್ನ, ಡಿ.ಕೆ ಶಿವಕುಮಾರ್ ಸರಿಸಮನಾಗಲು ನನಗೆ ಸಾಧ್ಯವಿಲ್ಲ. ಏಳೇಳು ಜನ್ಮದಲ್ಲೂ ಡಿಕೆಶಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ. ಡಿಕೆಶಿ ದೊಡ್ಡವರು. ಅವರ ಮುಂದೆ ನಾನು ಸಣ್ಣವನು ಎಂದು ವ್ಯಂಗ್ಯವಾಡಿದರು.

Key words: RR Nagar-BJP candidate- Muniratna- says- all Congress -MLAs – unemployed