Saturday, September 26, 2026

BDA Apartments

ಗಾಝಾದಲ್ಲಿರುವ ಮುಸ್ಲಿಮರಿಗೆ 1.5 ಮಿಲಿಯನ್ ಡಾಲರ್ ದಾನ ಮಾಡಿದ ರೊನಾಲ್ಡೊ BDA JK_Adv BD...
Home Front Page ಗಾಝಾದಲ್ಲಿರುವ ಮುಸ್ಲಿಮರಿಗೆ 1.5 ಮಿಲಿಯನ್ ಡಾಲರ್ ದಾನ ಮಾಡಿದ ರೊನಾಲ್ಡೊ

ಗಾಝಾದಲ್ಲಿರುವ ಮುಸ್ಲಿಮರಿಗೆ 1.5 ಮಿಲಿಯನ್ ಡಾಲರ್ ದಾನ ಮಾಡಿದ ರೊನಾಲ್ಡೊ

ಲಂಡನ್, ಮೇ, 18, 2019 (www.justkannada.in): ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ರಮಝಾನ್ ನಲ್ಲಿ ಗಾಝಾದಲ್ಲಿರುವ ಮುಸ್ಲಿಮರಿಗಾಗಿ 1.5 ಮಿಲಿಯನ್ ಡಾಲರ್  (10.5 ಕೋಟಿ ರೂ.) ದಾನ ಮಾಡಿದ್ದಾರೆ.

2012ರಲ್ಲಿ ತನ್ನ ಯುರೋಪಿಯನ್ ಗೋಲ್ಡನ್ ಬೂಟನ್ನು ಹರಾಜು ಹಾಕಿದ್ದ ರೊನಾಲ್ಡೋ, ಅದರಿಂದ ಬಂದ 1.5 ಮಿಲಿಯನ್ ಡಾಲರ್ ಹಣವನ್ನು ಗಾಝಾದಲ್ಲಿ ಹಲವು ಶಾಲೆಗಳ ನಿರ್ಮಾಣಕ್ಕಾಗಿ ದಾನ ಮಾಡಿದ್ದರು.

ಪೋರ್ಚುಗಲ್ ಮತ್ತು ಇಸ್ರೇಲ್ ನಡುವಿನ ವಿಶ್ವಕಪ್ ಅರ್ಹತಾ ಪಂದ್ಯದ ವೇಳೆ ಇಸ್ರೇಲಿ ಆಟಗಾರನೊಂದಿಗೆ ಟಿಶರ್ಟ್ ಬದಲಿಸಲು ನಿರಾಕರಿಸಿದ್ದ ರೊನಾಲ್ಡೋ ಈ ಹಿಂದೆ ಸುದ್ದಿಯಾಗಿದ್ದರು.