Sunday, August 23, 2026

BDA Apartments

Home Front Page ಮೈಸೂರು ಡಿಸಿ ರೋಹಿಣಿ ಸಿಂಧೂರಿ ನೇಮಕ ವಿಚಾರ: ವರ್ಗಾವಣೆ ಪ್ರಶ್ನಿಸಿ ಬಿ.ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ...

ಮೈಸೂರು ಡಿಸಿ ರೋಹಿಣಿ ಸಿಂಧೂರಿ ನೇಮಕ ವಿಚಾರ: ವರ್ಗಾವಣೆ ಪ್ರಶ್ನಿಸಿ ಬಿ.ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ…

ಮೈಸೂರು,ಅಕ್ಟೋಬರ್,7,2020(www.justkannada.in): ಮೈಸೂರು ಡಿಸಿಯಾಗಿ ರೋಹಿಣಿ ಸಿಂಧೂರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅವಧಿಗೂ ಮುನ್ನ ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರ ಪ್ರಶ್ನಿಸಿ ನಿರ್ಗಮಿತ ಬಿ. ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸಿಎಟಿ ಅಕ್ಟೋಬರ್ 14ಕ್ಕೆ ಮುಂದೂಡಿದೆ.jk-logo-justkannada-logo

ಆಗಸ್ಟ್ 29 ರಂದು ಮೈಸೂರು ಜಿಲ್ಲಾಧಿಕಾರಿಯಾಗಿ ಬಿ ಶರತ್ ಅವರನ್ನ ಸರ್ಕಾರ ನೇಮಕ ಮಾಡಿತ್ತು. ಬಳಿಕ ಸೆಪ್ಟಂಬರ್ 29 ರಂದು ದಸರ ಮಹೋತ್ಸವದ ಪೂರ್ವ ಸಿದ್ಧತಾ ಕಾರ್ಯಗಳ ನಡೆವೆಯೂ ಏಕಾಏಕಿ ಬಿ.ಶರತ್ ಅವರನ್ನ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ಅವರನ್ನು ಸೆಪ್ಟಂಬರ್ 29 ರಂದು  ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿತ್ತು.rohini-sindhuri-appointed-mysore-dc-adjournment-petition-transfer-b-sharath

ಹೀಗಾಗಿ ಕೇವಲ‌ 30 ದಿನಕ್ಕೆ ವರ್ಗಾವಣೆ ಪ್ರಶ್ನಿಸಿ  IAS ಅಧಿಕಾರಿ ಬಿ ಶರತ್ ಸಿಎಟಿಗೆ ಅರ್ಜಿ ಸಲ್ಲಿಸಿದ್ದು ಇಂದು ವಿಡಿಯೋ ಕಾನ್ಪರೇನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿದೆ.

Key words: Rohini Sindhuri -appointed – Mysore DC-Adjournment -petition- transfer -B.Sharath