ಮೈಸೂರು,ಜನವರಿ,19,2026 (www.justkannada.in): ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಚಿನ್ನದಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರದ ಬಳಿಕ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಹುಣಸೂರು ನಗರದ ಸ್ಕೈ ಗೊಲ್ಡ್ ಅಂಡ್ ಡೈಮಂಡ್ ಚಿನ್ನದಂಗಡಿಯಲ್ಲಿ ದರೋಡೆಯಾಗಿತ್ತು. ಬಂಧಿತ ಆರೋಪಿಗಳು ಬಿಹಾರ ಮೂಲದವಾಗಿದ್ದು, ದರ್ಭಾಂಗದ ಹೃಷಿಕೇಶ್ ಸಿಂಗ್, ಬಾಗಲ್ಪುರದ ಪಂಕಜ್ ಕುಮಾರ್ ಬಂಧಿತರು. ಪೊಲೀಸರು ಬಂಧಿತ ಆರೋಪಿಗಳನ್ನು ಮೈಸೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದು, ಇನ್ನು ಮೂವರು ಆರೋಪಿಗಳಿಗೆ ಶೋಧಕಾರ್ಯ ಮುಂದುವರೆದಿದೆ.
ಬಿಹಾರದ ಎಸ್‌ಟಿಎಫ್ ನೆರವಿನೊಂದಿಗೆ ರಾಜ್ಯದ ಪೊಲೀಸರು ಕಾರ್ಯಾಚರಣೆ ನಡೆಸಿಬಿಹಾರದ ಬಾಗಲ್ಪುರ ಹಾಗೂ ದರ್ಭಾಂಗದಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಒಂದು ಚಿನ್ನದ ಸರ, 1 ಲಕ್ಷ ಮೌಲ್ಯದ ಚಿನ್ನದ ಉಂಗುರ, ಬೈಕ್ ಆಭರಣ ಸಂಗ್ರಹಿಸಿಡುವ ಪೆಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ.
ಹುಣಸೂರಿನಲ್ಲಿ ಹಾಡು ಹಗಲೇ ಚಿನ್ನದಂಗಡಿಗೆ ನುಗ್ಗಿ 10ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಖದೀಮರು ದೋಚಿದ್ದರು. ದರೋಡೆಕೋರರ ಸೆರೆಗಾಗಿ ಪೊಲೀಸರ ಐದು ತಂಡ ರಚಿಸಲಾಗಿತ್ತು. ದರೋಡೆಕೋರರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
Key words: Gold shop, robbery case, Mysore, Two arrested







