Friday, September 11, 2026

BDA Apartments

Home Front Page ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್’ನಲ್ಲಿ ರಿಷಭ್ ಪಂತ್

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್’ನಲ್ಲಿ ರಿಷಭ್ ಪಂತ್

ಬೆಂಗಳೂರು, ಫೆಬ್ರವರಿ 03, 2020 (www.justkannada.in): ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ನಾಮನಿರ್ದೇಶನಗೊಂಡಿದ್ದಾರೆ.

ಪಂತ್ ಜತೆ ಇಂಗ್ಲೆಂಡ್‌ನ ನಾಯಕ ಜೋ ರೂಟ್ ಹಾಗೂ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಕೂಡ ನಾಮ ನಿರ್ದೇಶನಗೊಂಡಿದ್ದಾರೆ.

ಆಸ್ಟ್ರೇಲಿಯದಲ್ಲಿ ಐತಿಹಾಸಿಕ ಗೆಲುವಿನ ರೂವಾರಿ 23ರ ಹರೆಯದ ಪಂತ್ ಆಸ್ಟ್ರೇಲಿಯ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಸಿಡ್ನಿಯಲ್ಲಿ 97 ರನ್ ಗಳಿಸಿದ್ದರು.

ಬ್ರಿಸ್ಬೇನ್ ನಲ್ಲಿ ಔಟಾಗದೆ 89 ರನ್ ಗಳಿಸಿ ಭಾರತವು ಐತಿಹಾಸಿಕ ಸರಣಿ ಗೆಲ್ಲುವಲ್ಲ್ಲೂ ಪ್ರಮುಖ ಕಾಣಿಕೆ ನೀಡಿದ್ದರು.

ಮಹಿಳಾ ಕ್ರಿಕೆಟಿಗರ ಪೈಕಿ ಪಾಕಿಸ್ತಾನದ ಡಯಾನಾ ಬೇಗ್, ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯೀಲ್ ಹಾಗೂ ಮರಿಝಾನೆ ಕಾಪ್ ತಿಂಗಳ ಆಟಗಾರ್ತಿ ಗೌರವಕ್ಕೆ ನಾಮನಿರ್ದೇಶನಗೊಂಡಿದ್ದಾರೆ.