Friday, September 11, 2026

BDA Apartments

Home Front Page ಕೆ.ಎನ್ ರಾಜಣ್ಣಗೆ ಹೇಳಿಯೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆ- ಡಿಸಿಎಂ ಪರಮೇಶ್ವರ್

ಕೆ.ಎನ್ ರಾಜಣ್ಣಗೆ ಹೇಳಿಯೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆ- ಡಿಸಿಎಂ ಪರಮೇಶ್ವರ್

ಬೆಂಗಳೂರು,ಸೆಪ್ಟಂಬರ್,11,2026 (www.justkannada.in): ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ  ಮಾಜಿ ಸಚಿವ ಕೆ.ಎನ್ ರಾಜಣ್ಣ ಅಸಮಾಧಾನ ಕುರಿತು ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸಚಿವ ಲಕ್ಷ್ಮಣ್ ಸವದಿ,  ಸಿಎಂ, ನಾವು ಎಲ್ಲರನ್ನೂ ಕರೆದು ಮಾತನಾಡಿದ್ದೇವೆ.  ಎಲ್ಲರೂ ಅವರವರ ಅಭಿಪ್ರಾಯ ಕೊಟ್ಟರು. ಸರ್ಕಾರ ನಮ್ಮದೇ ಇರುವಾಗ ಎಲೆಕ್ಷನ್ ಮಾಡುವುದು ಬೇಡ ಒಮ್ಮತದಿಂದ ಆಯ್ಕೆ ಮಾಡೋಣ ಎಂದು ನಿರ್ಧಾರ ಮಾಡಲಾಗಿತ್ತು.  ಎಲ್ಲರ ಅಭಿಪ್ರಾಯವನ್ನ ಪಡೆದೇ ಎಸ್ ರವಿ ಆಯ್ಕೆ ಮಾಡಲಾಗಿದೆ . ರಾಜಣ್ಣಗೆ ಹೇಳಿಯೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ.  ಕೋ ಅಪರೇಟಿವ್ ವಿಚಾರದಲ್ಲಿ ಜಾತಿ ಧರ್ಮ ರಾಜಕೀಯ ಬರಲ್ಲ.  ಯಾರು ಕೆಲಸ ಮಾಡುತ್ತಾರೋ ಅವರನ್ನೆ ಎಲ್ಲರೂ ಸೇರಿ ಆಯ್ಕೆ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯರಿಗೆ ಯಾವುದೇ ಅಸಮಾಧಾನ ಇಲ್ಲ ಅಸಮಾಧಾನ ಇದ್ದಿದ್ದರೇ ರಾಜೀನಾಮೆ ನೀಡುತ್ತಿರಲಿಲ್ಲ ಸಿದ್ದರಾಮಯ್ಯ ದೆಹಲಿಗೆ ಹೋಗಿರುವುದು ಬೇರೆ ಕೆಲಸಕ್ಕೆ ಎಂದು ಪರಮೇಶ್ವರ್ ತಿಳಿಸಿದರು.

Key words: K.N. Rajanna, Apex Bank, Chairman, DCM, Parameshwara