ಮಾಸ್ಕ್ ಇಲ್ಲದೇ ಪಂದ್ಯ ನೋಡಲು ಬಂದು ಪೇಚಿಗೆ ಸಿಲುಕಿದ ಪಂತ್

ಬೆಂಗಳೂರು, ಜುಲೈ 01, 2021 (www.justkannada.in): ಮಾಸ್ಕ್‌ ಇಲ್ಲದೇ ಪಂದ್ಯ ನೋಡಲು ಹೋಗಿದ್ದ ಪಂತ್‌ ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದೊಂದಿಗೆ ಲಂಡನ್‌ನಲ್ಲಿರುವ ವಿಕೆಟ್ ಕೀಪರ್‌ ರಿಶಭ್ ಪಂತ್‌ ತಮ್ಮ ಸ್ನೇಹಿತರೊಂದಿಗೆ ಇಲ್ಲಿನ ಐತಿಹಾಸಿಕ ವೆಂಬ್ಲಿ ಕ್ರೀಡಾಂಗಣದಲ್ಲಿ ಯೂರೋ 2020 ಪಂದ್ಯ ನೋಡಲು ಹೋಗಿದ್ದರು. ಆ ವೇಳೆ ಫ್ರೆಂಡ್ಸ್ ಜತೆ ಫೋಟೋಗೂ ಫೋಸ್ ಕೊಟ್ಟರು. ಆದರೆ ಮಾಸ್ಕ್ ಧರಿಸುವುದನ್ನೇ ಮರೆತಿದ್ದರು.

ಇಂಗ್ಲೆಂಡ್ ಹಾಗೂ ಜರ್ಮನಿ ನಡುವಿನ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ವೇಳೆ ಮಾಸ್ಕ್ ಧರಿಸಿರಲಿಲ್ಲ. ಈ ಫೋಟೋವನ್ನು ಪೋಸ್ಟ್ ಕೂಡ ಮಾಡಿದ್ದರು. ಇದನ್ನು ನೋಡಿದ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಕೋವಿಡ್ ಸಾಂಕ್ರಮಿಕದ ನಿರ್ಬಂಧಗಳು ಸೆಲೆಬ್ರಿಟಿಗಳಿಗೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.