ರಿಷಬ್ ಶೆಟ್ಟರ ‘ಗಿರಿಕತೆ’ ಡೈರೆಕ್ಟರ್ ಚೇಂಜ್ !

ಬೆಂಗಳೂರು, ಡಿಸೆಂಬರ್ 02, 2020 (www.justkannada.in): ರಿಷಬ್ ಶೆಟ್ಟಿ ನಾಯಕರಾಗಿರುವ ಹರಿಕತೆ ಅಲ್ಲ ಗಿರಿಕತೆ ಸಿನಿಮಾದ ನಿರ್ದೇಶಕರು ಬದಲಾಗಿದ್ದಾರೆ. ಅನಾರೋಗ್ಯ ಕಾರಣದಿಂದಾಗಿ ನಿರ್ದೇಶಕ ಗಿರಿಕೃಷ್ಣ ಚಿತ್ರದಿಂದ ಹೊರಬಂದಿದ್ದಾರೆ.

ಈಗಾಗಲೇ ಶೂಟಿಂಗ್ ಆರಂಭಿಸಿರುವ ಹರಿಕತೆ ಸಿನಿಮಾವನ್ನು ಆರೋಗ್ಯ ಸ್ಥಿತಿಯಿಂದಾಗಿ ಗಿರಿಕೃಷ್ಣ ಅರ್ಧದಲ್ಲೇ ಬಿಟ್ಟು ಹೊರಬರುತ್ತಿದ್ದಾರೆ. ಸದ್ಯಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಜವಾಬ್ಧಾರಿ ಹೊತ್ತಿದ್ದಾರೆ.

ಮೈಸೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಗಿರಿಕೃಷ್ಣಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಚೇತರಿಸಿಕೊಳ್ಳಲು ಕೆಲವು ದಿನ ಬೇಕಾಗುತ್ತದೆ. ಆದರೆ ಅಷ್ಟು ದಿನ ಚಿತ್ರೀಕರಣ ಮುಂದೂಡಿದರೆ ಕಲಾವಿದರಿಗೆ ತೊಂದರೆಯಾಗುತ್ತದೆ. ಇದೇ ಕಾರಣಕ್ಕೆ ನಿರ್ದೇಶಕರೇ ಬದಲಾಗಿದ್ದಾರೆ.