ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು.

ಮೈಸೂರು,ಸೆಪ್ಟಂಬರ್,17,2021(www.justkannada.in): ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ.

ಎಚ್ ಡಿ ಕೋಟೆ ತಾಲೂಕಿನ ಮಗ್ಗೆ-ಮಳಲಿ ಬಳಿ ಈ ಅಪಘಾತ ಸಂಭವಿಸಿದೆ. ತಾಲೂಕಿನ ಕಾರಾಪುರ ಗ್ರಾಮದ ನಿವಾಸಿ ಸೋಮನಾಯ್ಕ (48) ಮೃತಪಟ್ಟವರು.nice road-Car overturn-driver-death 

ಕಾರಾಪುರ ಜಂಗಲ್ ರೆಸಾರ್ಟ್ ನಲ್ಲಿ ನೌಕರನಾಗಿದ್ದ ಸೋಮನಾಯ್ಕ, ಎಚ್ ಡಿ ಕೋಟೆಯಿಂದ ಜಂಗಲ್ ರೆಸಾರ್ಟ್ ಗೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಟ್ರಾಕ್ಟರ್ ಚಾಲಕನ ನಿಯಂತ್ರಣ ಕಳೆದುಕೊಂಡು ಬೈಕ್ ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಈ ಕುರಿತು ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  rider- died – spot – collision -between – bike and -tractor