ಮಗಳ ಮರ್ಡರ್‌ ಗೆ ಪ್ರತೀಕಾರ: ಚಾಕುವಿನಿಂದ ಇರಿದು ಆರೋಪಿ ತಂದೆಯ ಹತ್ಯೆ

ಮಂಡ್ಯ,ಮೇ,6,2025 (www.justkannada.in): ತನ್ನ ಮಗಳನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಈಕೆಯ ತಂದೆ  ಆರೋಪಿಯ ತಂದೆಯನ್ನ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ‌ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ನಡೆದಿದೆ.

ಶಿಕ್ಷಕಿ  ದೀಪಿಕಾ ಎಂಬುವವರನ್ನು ಯುವಕ ನಿತೀಶ್ ಕೊಲೆ ಮಾಡಿ ಜೈಲು ಸೇರಿದ್ದ. ಕಳೆದ ವರ್ಷದ ಜನವರಿಯಲ್ಲಿ ಶಿಕ್ಷಕಿ ದೀಪಿಕಾ ಕೊಲೆಯಾಗಿತ್ತು. ಇದಾದ ಬಳಿಕ ನಿತೀಶ್ ಜೈಲಿನಿಂದ ಹೊರ ಬಂದಿದ್ದ. ಈ ಮಧ್ಯೆ ಮಗಳ‌ ಕೊಲೆಯ ಪ್ರತೀಕಾರ ತೀರಿಸಿಕೊಳ್ಳಲು  ಕಾಯುತ್ತಿದ್ದ ದೀಪಿಕಾ ತಂದೆ ಕಾಯುತ್ತಿದ್ದರು.

ಆದರೆ  ಆರೋಪಿ ನಿತೀಶ್ ದೀಪಿಕಾ ತಂದೆ ಕೈಗೆ ಸಿಕ್ಕಿರಲಿಲ್ಲ. ಈ ನಡುವೆ ಇಂದು ದೀಪಿಕಾ ತಂದೆಗೆ ನಿತೀಶ್ ತಂದೆ ನರಸಿಂಹೇಗೌಡ ಸಿಕ್ಕಿದ್ದು ಈ ವೇಳೆ  ನರಸಿಂಹೇಗೌಡ ಹೊಟ್ಟೆ ಭಾಗಕ್ಕೆ ದೀಪಿಕಾ ತಂದೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಬೆಳಗ್ಗೆ 8.30ರ ವೇಳೆಗೆ ಈ ಘಟನೆ ನಡೆದಿದ್ದು ಚಾಕು ಇರಿತದಿಂದಾಗಿ ನರಸಿಂಹೇಗೌಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: Revenge, daughter, murder, Accused, father, Kill