ನಿವೃತ್ತ ಅಧಿಕಾರಿ ಹತ್ಯೆ ಪ್ರಕರಣ: ಕೊಲೆ ಮಾಡುವ ಉದ್ದೇಶದಿಂದಲೇ ಕಾರು ಖರೀದಿ.

ಮೈಸೂರು.ನವೆಂಬರ್,8,2022(www.justkannada.in):  ಮೈಸೂರಿನಲ್ಲಿ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಕೊಲೆ‌ ಪ್ರಕರಣ ಸಂಬಂಧ, ನಾಲ್ಕೇ ದಿನಕ್ಕೆ ಮೈಸೂರು ನಗರ ಪೋಲಿಸರು ಪ್ರಕರಣ ಭೇದಿಸಿದ್ದು, ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದಲೇ ಕಾರು ಖರೀದಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ನವೆಂಬರ್ 4 ರಂದು ಸಂಜೆ ಅಫಘಾತ ಮಾದರಿಯಲ್ಲಿ ನಿವೃತ್ತ ಅಧಿಕಾರಿ ಕುಲಕರ್ಣಿ ಅವರ  ಕೊಲೆಯಾಗಿತ್ತು. ಮೈಸೂರು ನಗರದ ಮಾನಸ ಗಂಗೋತ್ರಿಯಲ್ಲಿ ಹಿಟ್ ಅಂಡ್ ರನ್  ಪ್ರಕರಣ ದಾಖಲಾಗಿತ್ತು. ಹಿಟ್ ಅಂಡ್ ರನ್ ಉದ್ದೇಶ ಪೂರ್ವಕವಾಗಿಯೇ ನಡೆದಿತ್ತು. ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆಗಾಗಿ ನಾಲ್ಕು ತಂಡ ರಚನೆ ಮಾಡಲಾಗಿತ್ತು. ಹಾಗಯೇ ಅತ್ಯಂತ ಜಾಗರುಕತೆಯಿಂದ ಸಾಕ್ಷ್ಯ ಸಂಗ್ರಹ ಮಾಡಲಾಗಿತ್ತು ಎಂದರು.

ಘಟನೆ ನಂತರ ನಿವೃತ್ತ ಅಧಿಕಾರಿ ಅಳಿಯ ದೂರು ನೀಡುತ್ತಾರೆ. ಪಕ್ಕದ ಮನೆಯ ಮಾದಪ್ಪ ಅವರ ಜೊತೆ ಜಾಗದ ವಿಚಾರಕ್ಕೆ ಗಲಾಟೆ ನಡೆದಿದೆ. ಜಾಗದ ವಿಚಾರಕ್ಕೆ ಕೊಲೆ ನಡೆದಿದೆ. ಕೊಲೆ ಮಾಡಿದವರನ್ನ ಬಂಧಿಸಲಾಗಿದೆ. ಕೊಲೆಗೆ ಉಪಯೋಗಿಸಿದ ಕಾರನ್ನ ಜಪ್ತಿ ಮಾಡಲಾಗಿದ್ದು, ಮಾದಪ್ಪನ ಕಿರಿಯ ಮಗ ಮತ್ತು ಸ್ನೇಹಿತರು ಸೇರಿ ಕೊಲೆ ಮಾಡಿದ್ದಾರೆ. ಇದೀಗ ಇಬ್ಬರನ್ನ ಬಂಧಿಸಲಾಗಿದೆ ಎಂದು ತಿಳಿಸಿದರು.

ಜಾಗದ ವಿಚಾರಕ್ಕೆ ಪದೆ ಪದೇ  ಜಗಳವಾಗಿದ್ದು ಕೊಲೆಗೆ ಪ್ರಮುಖ‌ ಕಾರಣವಾಗಿದೆ.  ಮನು ಒಬ್ಬನೆ ಕಾರಿನಲ್ಲಿ ಇದ್ದರು. ಕೃತ್ಯಕ್ಕೂ ಮುನ್ನ ಅಧಿಕಾರಿಯ ಪ್ರತಿದಿನದ ಚಲನವಲನಗಳನ್ನ ಗಮನಿಸಿದ್ದಾರೆ. ಹೋಂಡಾ ಕಂಪನಿ ಕಾರಾಗಿದ್ದು. ರಘು ಎಂಬ ಯುವಕನಿಗೆ ಸೇರಿದ ಕಾರನ್ನ ಕೊಲೆ ಮಾಡುವ ಉದ್ದೇಶದಿಂದಲೇ ಖರೀದಿ ಮಾಡಿದ್ದರು. ಆರೋಪಿ ಮನು ಎಂಬಿಎ ಪದವೀಧರನಾಗಿದ್ದಾನೆ  ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದರು.

Key words: Retired- officer- murder –case-mysore-Buying – car