ನಿವೃತ್ತ ಲೋಕಾಯುಕ್ತ ಎನ್. ವೆಂಕಟಾಚಲ ನಿಧನ…

ಬೆಂಗಳೂರು,ಅ,30,2019(www.justkannada.in): ನಿವೃತ್ತ  ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ (90) ಕೊನೆಯುಸಿರೆಳೆದಿದ್ದಾರೆ.

ವೆಂಕಟಾಚಲ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೆಂಕಟಾಚಲ ನಿಧನರಾಗಿದ್ದಾರೆ.

ಮೇಲ್ನೋಟಕ್ಕೆ ವೆಂಕಟಾಚಲ ಅವರ ಕಾರ್ಯವೈಖರಿ ಬಹು ಗಡಸು. ದಾಳಿ ಮತ್ತು ಕಚೇರಿ ಪರಿಶೀಲನೆಗೆ ಅವರ ಮೊದಲ ಪ್ರಾಶಸ್ತ್ಯ. ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅವರು ನೇಮಕವಾಗಿದ್ದರು.

Key words: Retired Lokayukta -N. Venkatachala- Death