ಯಶ್-ರಾಧಿಕಾ ಮನೆಗೆ ಬಂದ ಜೂನಿಯರ್ ಯಶ್ !

ಬೆಂಗಳೂರು, ಅಕ್ಟೋಬರ್ 30, 2019 (www.justkannada.in): ನಟ ಯಶ್ ಅವರ ಪತ್ನಿ ನಟಿ ರಾಧಿಕಾ ಪಂಡಿತ್ ಇಂದು ಬೆಳಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ರಾಕಿಂಗ್ ಯಶ್ ಕುಟುಂಬದ ಮೂಲಗಳು ತಿಳಿಸಿವೆ. ಈಗಾಗಲೇ ದಂಪತಿಗೆ 11 ತಿಂಗಳ ಒಂದು ಹೆಣ್ಣು ಮಗು ಇದೆ.

2018ರ ಡಿಸೆಂಬರ್ ನಲ್ಲಿ ರಾಧಿಕಾ ಪಂಡಿತ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಎರಡನೇ ಮಗುವಿನ ಫೋಟೊವನ್ನು ದಂಪತಿ ಇನ್ನಷ್ಟೇ ಬಹಿರಂಗಪಡಿಸಬೇಕಾಗಿದೆ.