ಹೆಚ್.ಡಿಕೆ ಸಿಎಂ ಆಗದಿದ್ದರೇ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ- ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ.

ರಾಯಚೂರು,ಡಿಸೆಂಬರ್,28,2022(www.justkannada.in):  ಮುಂದೆ ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗದಿದ್ದರೇ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ,  ನಾವು 2023ರ ಚುನಾವಣೆಗಾಗಿ ಜನರ ಮುಂದೆ ಹೋಗುತ್ತಿದ್ದೇವೆ. ರಾಜ್ಯದ ಹಲವು ಕಡೆ ನಾವು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಜನವರಿ ತಿಂಗಳಲ್ಲಿ ಬೇರೆ ಪಕ್ಷದವರು ನಮ್ಮ ಪಕ್ಷಕ್ಕೆ ಬರುತ್ತಾರೆ. ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ. ಒಂದು ವೇಳೆ ಅವರು ಸಿಎಂ ಆಗದಿದ್ದರೇ ನಾನು ರಾಜಕೀಯ ನಿವೃತ್ತಿ  ಪಡೆಯುತ್ತೇನೆ ಎಂದರು.

ತೆಲಂಗಾಣದಲ್ಲಿ ಚಂದ್ರಶೇಖರ್  ನಾಲ್ಕು ವರ್ಷದಲ್ಲಿ ನೀರಾವರಿ ಮುಗಿಸಿದರು. ನಮ್ಮ ರಾಜ್ಯದ 26 ಜನ ಎಂಪಿಗಳು ಕೂಳಿಗೆ ಭಾರವಾಗಿದ್ದಾರೆ. ಜೆಡಿಎಸ್ ಗೆ ಯಾರೂ ಹೈಕಮಾಂಡ್ ಇಲ್ಲ, ಜನರೇ ನಮಗೆ ಹೈಕಮಾಂಡ್ ಎಂದು ಸಿಎಂ ಇಬ್ರಾಹಿಂ ಹೇಳಿದರು.

Key words:  retire – politics – HDK -does not -become –CM-JDS -State President- CM Ibrahim.