ಮೈಸೂರು,ಜನವರಿ,24,2026 (www.justkannada.in): ಹೆಚ್.ಡಿ ಕೋಟೆ ತಾಲೂಕಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವತಿಯಿಂದ “ಕಲಿಕಾ ಮೃತ” ಎಂಬ ಪ್ರಶ್ನೋತ್ತರ ಮಾಲಿಕೆಯ ಮಾರ್ಗದರ್ಶಿ ಕೈಪಿಡಿಯನ್ನು ಶಾಸಕ ಅನಿಲ್ ಚಿಕ್ಕಮಾದು ಬಿಡುಗಡೆಗೊಳಿಸಿದರು.
ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ತಾಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ 10ನೇ ತರಗತಿಯ ತರಗತಿ ಶಿಕ್ಷಕರು ಮತ್ತು ಪಟ್ಟಣದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎನ್ ರಾಜುರವರು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪುಸ್ತಕ ಪರಿಚಯ ಮಾಡಿ ಮನವರಿಕೆ ಮಾಡಿದರು.
ಉತ್ತಮ ಫಲಿತಾಂಶ ಪಡೆದ ಶಾಲೆಗಳಿಗೆ ನಗದು ಬಹುಮಾನ-ಶಾಸಕರಿಂದ ಘೋಷಣೆ
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಉತ್ತಮ ಫಲಿತಾಂಶ ಪಡೆದ ಶಾಲೆಗಳಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು. ತಾಲೂಕಿನಲ್ಲಿ ವಿಶೇಷವಾಗಿ ಕಲಿಕಾ ಕಾತ್ರಿ ಪರೀಕ್ಷೆಗಳು ನಾನು ಓದುತ್ತಿದ್ದೇನೆ ಕಾರ್ಯಕ್ರಮ, ಕನ್ನಡ ಭಾಷಾ ಪ್ರಯೋಗಾಲಯ ಸರ್ಕಾರಿ ಪ್ರೌಢಶಾಲೆಗಳಲ್ಲಿ “ಶಾಲಾ ವಾಸ್ತವ್ಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮಹತ್ವ ಮತ್ತು ಜಾಗೃತಿ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಇಷ್ಟಪಟ್ಟು ಓದಬೇಕು ಕಷ್ಟಪಟ್ಟು ಓದಬಾರದು ಆಗಿದ್ದಾಗ ಮಾತ್ರ ಓದಿದ ವಿಷಯ ತಲೆಗೆ ಹತ್ತುತ್ತದೆ ಮತ್ತು ಪರೀಕ್ಷೆಯಲ್ಲಿ ಜ್ಞಾಪಕ್ಕೆ ಬರುತ್ತದೆ. ನಾಗ ಒಳ್ಳೆಯ ಅಂಕ ಪಡೆದು ಉತ್ತೀರ್ಣರಾಗಬಹುದು ಇಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಸದಸ್ಯ ನರಸಿಂಹಮೂರ್ತಿ ಅವರು ಮಾತನಾಡಿ, ಈ ಬಾರಿ ಶಿಕ್ಷಣ ಇಲಾಖೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ವಿಚಾರದಲ್ಲಿ ತುಂಬಾ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎನ್ ನಾರಾಯಣಸ್ವಾಮಿ ನಾಗರಾಜ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಮೋದ್ , ಪ್ರಸನ್ನ, ಕಾರ್ಯದರ್ಶಿ ಭೀಮಪ್ಪ, ಪ್ರಶಾಂತ್, ಆನಂದ್ ಉಪಸ್ಥಿತರಿದ್ದರು.
Key words: Cash prize, schools, best results, SSLC, Anil Chikkamadu







