Saturday, September 5, 2026

BDA Apartments

Home Front Page ಕೊಡಗಿನಲ್ಲಿ ಬಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ

ಕೊಡಗಿನಲ್ಲಿ ಬಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ

ಕೊಡಗು,ಜೂನ್,6,2026 (www.justkannada.in): ಕೊಡಗಿನಲ್ಲಿ ಮುಂಗಾರು ಮಳೆ ಆರಂಭ ಹಿನ್ನೆಲೆಯಲ್ಲಿ ಬಾರೀ ವಾಹನಗಳ ಸಂಚಾರವನ್ನ ನಿರ್ಬಂಧಿಸಲಾಗಿದೆ.

ಮುಂಗಾರು ವೇಳೆ ಬಾರೀ  ವಾಹನಗಳ ಸಂಚಾರದಿಂದ ತೊಂದರೆ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ನಿರ್ಬಂಧ ವಿಧಿಸಿ ಕೊಡಗು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಜೂನ್ 10 ರಿಂದ ಜುಲೈ 9ರವರೆಗೆ ಕೊಡಗಿನಲ್ಲಿ 18,500 ಕೆಜಿ ಗಿಂತಲೂ ತೂಕವಿರುವ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಭೂಕುಸಿತ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಕೊಡಗು ಜಿಲ್ಲಾಡಳಿತವು ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

Key words: Restrictions, heavy vehicle, traffic, Kodagu