ಮುರುಘಾ ಮಠದ  ಶ್ರೀಗಳ ಬಗ್ಗೆ ಗೌರವ ಕಡಿಮೆ ಆಗಿಲ್ಲ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ಸೆಪ್ಟಂಬರ್,3,2022(www.justkannada.in): ಪೋಕ್ಸೋ ಕಾಯ್ದೆಯಡಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗಳ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ, ಶ್ರೀಗಳ ಬಗ್ಗೆ ಗೌರವ ಕಡಿಮೆ ಆಗಿಲ್ಲ. ತನಿಖೆಯಿಂದ ಸತ್ಯಾಂಶ ಹೊರಬರಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಕೇಸ್ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಆಗುತ್ತಿದೆ.  ಅನಿಷ್ಟ ಎನ್ನಿಸುತ್ತಿದೆ.  ಮಠದ ಸ್ವಾಮೀಜಿಗಳು ಅಂದ್ರೆ ನನಗೆ ದೇವರು ಇದ್ದಂತೆ.  ಮುರುಘಾ ಮಠ ಶ್ರೀಗಳ ಬಗ್ಗೆ ಗೌರವ ಕಡಿಮೆ ಆಗಿಲ್ಲ.

ತನಿಖೆಯಿಂದ ಸುಳ್ಳೋ ಸತ್ಯವೋ ಎಂಬುದು ಹೊರಬರಲಿ. ಹಿಂದೂ ಧರ್ಮಕ್ಕೆ  ಪ್ರೇರಣೆಯಾಗಿರುವುದು ಸಾಧು ಸಂತರೇ ಎಂದು ಕೆ.ಎಸ್ ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

Key words: Respect – Muruga Math -not –decreased-Former minister- KS Eshwarappa.