ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಸ್ಪೀಕರ್ ಎದುರು ಹಾಜರಾಗಲು ಸಿದ್ಧ- ಅತೃಪ್ತ ಶಾಸಕ ಎಸ್.ಟಿ ಸೋಮಶೇಖರ್ ಸ್ಪಷ್ಟನೆ…

ಬೆಂಗಳೂರು,ಜು,9,2019(www.justkannada.in):  ನಾವು ಪರ್ಸನಲ್ ಅಜೇಂಡಾಗೆ ರಾಜೀನಾಮೆ ನೀಡಿಲ್ಲ. ಕ್ಷೇತ್ರದ ಅಭಿವೃದ್ದಿ ವಿಚಾರವಾಗಿ ರಾಜೀನಾಮೆ ನೀಡಿದ್ದೇವೆ. ಹೀಗಾಗಿ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಅತೃಪ್ತಶಾಸಕ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ಮುಂಬೈ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.  ಈ ವೇಳೆ ಪ್ರತಿಕ್ರಿಯಿಸಿದ ಅತೃಪ್ತ ಶಾಸಕ ಎಸ್.ಟಿ ಸೋಮಶೇಖರ್,  ಸ್ಪೀಕರ್ ಸಮಯ ನಿಗದಿ ಮಾಡಿದರೇ ಸ್ಪೀಕರ್ ಎದುರು ನಾವು ಹಾಜರಾಗಲು ಸಿದ್ಧ ಎಂದು ತಿಳಿಸಿದರು.

ಜನರಿಗೆ ಮೈತ್ರಿ ಸರ್ಕಾರ ಇಷ್ಟ ಇಲ್ಲ.ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಅಭಿವೃದ್ದಿ ಕೆಲಸಗಳು ಆಗದೆ ಇರೋದೇ ರಾಜೀನಾಮೆಗೆ ಕಾರಣ.  ನಾನು 10 ಶಾಸಕರು ಒಟ್ಟಾಗಿದ್ದೇವೆ. ನಮ್ಮ ಕ್ಷೇತ್ರಗಳಲ್ಲಿರುವ ಸಮಸ್ಯೆಗಳನ್ನ ಸಿಎಲ್ ಪಿ ನಾಯಕರಿಗೆ ತಿಳಿಸಿದ್ದವು. ಆದರೆ ಆ ಬಗ್ಗೆ ಗಮನ ಕೊಡಲಿಲ್ಲ. ಹೀಗಾಗಿ ನಾವು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ ಎಂದರು.

ನಾವು ಕಾಂಗ್ರೆಸ್ ಪಕ್ಷ ಬಿಟ್ಟಿಲ್ಲ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. ನಾವು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕಲ್ಲ. ನಾವು ಈವರೆಗೆ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ನಮ್ಮ ವಿರುದ್ದ ಒಂದು ನಿಯಮ ಉಲ್ಲಂಘನೆ ಆರೋಪವಿಲ್ಲ.  ನಮ್ಮನ್ನ ಯಾರೂ ಸಂಪರ್ಕಿಸಿಲ್ಲ ಎಂದು ಎಸ್ ಟಿ ಸೋಮಶೇಖರ್ ಸ್ಪಷ್ಟಪಡಿಸಿದರು.

ಇದೇ ವೇಳೆ ಡಿ.ಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟ ಶಾಸಕ ಎಸ್.ಟಿ ಸೋಮಶೇಖರ್, ನಾವು ಯಾರ ಕಸ್ಟಡಿಯಲ್ಲೂ ಇಲ್ಲ. ಗನ್ ಹಿಡಿದು ಯಾರೂ ನಮ್ಮನ್ನ ಹೆದರಿಸಿಲ್ಲ. ನಮ್ಮನ್ನ ಯಾರೂ ಸಂಪರ್ಕ ಮಾಡಿಲ್ಲ. ಎಂದು ಬಿಜೆಪಿ ಅಪರೇಷನ್ ಕಮಲವನ್ನ ತಳ್ಳಿಹಾಕಿದರು.

Key words: resignation-Ready – attend – speaker-ST Somashekhar