ಬಿಜೆಪಿಯನ್ನು ನಂಬಿ ಹೋದರೆ, ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಗಾದ ಸ್ಥಿತಿಯೇ ನಿಮಗೂ ಆಗುತ್ತದೆ: ಅತೃಪ್ತ ಶಾಸಕರಿಗೆ ಆರ್ ವಿ ದೇವರಾಜ್ ಎಚ್ಚರಿಕೆ

ಬೆಂಗಳೂರು: ಜುಲೈ-9;(www.justkannada.in) ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿರುವ ಕಾಂಗ್ರೆಸ್​ ಮಾಜಿ ಶಾಸಕ ಆರ್​.ವಿ.ದೇವರಾಜ್, ಕಾಂಗ್ರೆಸ್​ ಬಿಟ್ಟು ಬಿಜೆಪಿಯನ್ನು ನಂಬಿ ಹೋದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರನ್ನು ಬಿಜೆಪಿ ಡಸ್ಟ್​ಬಿನ್​ಗೆ ಎಸೆದಿದೆ. ಅದೇ ರೀತಿ ನಿಮ್ಮನ್ನು ಕೂಡ ಕಡೆಗಣಣಿಸಿ ಡಸ್ಟ್​ಬಿನ್​ ಗೆ ಹಾಕುತ್ತಾರೆ ಎಂದು ಹೇಳಿದ್ದಾರೆ.

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ, ಆರ್.ವಿ ದೇವರಾಜ್, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನಿಮಗೆ ಎಲ್ಲವನ್ನು ಕೊಟ್ಟಿದೆ. ರಾಮಲಿಂಗಾರೆಡ್ಡಿ ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಬಾರದು. ಲಕ್ಷಾಂತರ ಕಾರ್ಯಕರ್ತರು ನಿಮ್ಮನ್ನು ನಂಬಿ ಗೆಲ್ಲಿಸಿದ್ದಾರೆ. ಬೆಂಗಳೂರಿಗೆ ರಾಮಲಿಂಗಾರೆಡ್ಡಿ ಅವರು ಸಿಎಂ ಇದ್ದಂತೆ. ಸೋನಿಯಾಗಾಂಧಿ ನಿಮ್ಮೊಡನೆ ಮಾತಾಡಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ಕೂಡಲೇ ಪಕ್ಷಕ್ಕೆ ವಾಪಸ್ ಬನ್ನಿ ಎಂದು ಮನವಿ ಮಾಡಿದರು.

ಬಿಜೆಪಿ ನಿಮ್ಮನ್ನು ಮಂತ್ರಿ ಮಾಡುವುದಾಗಿ, ಒಳ್ಳೆ ಸ್ಥಾನ ನೀಡುವುದಾಗಿ ಆಮಿಷ ನೀಡಿ ಕರೆಯುತ್ತದೆ. ಪಕ್ಷಕ್ಕೆ ಬಂದ ಬಳಿಕ ಹತ್ತಿರಕ್ಕೂ ಸೇರಿಸಲ್ಲ. ಇದಕ್ಕೆ ಉದಾಹರಣೆ ಮಾಜಿ ಸಿಎಂ ಎಸ್ ಎಂ ಕೃಷ್ಣ. ಬಿಜೆಪಿಯನ್ನು ನಂಬಿ ಅವರು ಎಲ್ಲವನ್ನೂ ನೀಡಿದ್ದ ಆಂಗ್ರೆಸ್ ಪಕ್ಷ ಬಿಟ್ಟು ಹೋದರು. ಬಿಜೆಪಿಗೆ ಹೋಗಿ ಎಸ್.ಎಂ ಕೃಷ್ಣರ ಸ್ಥಿತಿ ಈಗ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತು. ಅವರಿಗೆ ಬಂದ ಪರಿಸ್ಥಿತಿ ನಾಳೆ ನಿಮಗೂ ಬರುತ್ತದೆ. ಹಾಗಾಗಿ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯನ್ನು ನಂಬಿ ಹೋದರೆ, ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಗಾದ ಸ್ಥಿತಿಯೇ ನಿಮಗೂ ಆಗುತ್ತದೆ: ಅತೃಪ್ತ ಶಾಸಕರಿಗೆ ಆರ್ ವಿ ದೇವರಾಜ್ ಎಚ್ಚರಿಕೆ

R V Devaraj,Congress-JDS,Rebel MLAs