Sunday, September 20, 2026

BDA Apartments

Home Front Page ಸಿದ್ದರಾಮಯ್ಯ ವಿರುದ್ದ ಮತ್ತೆ ಗುಡುಗು:  ರಾಜೀನಾಮೆ ವಾಪಸ್ ಕುರಿತು ಹೆಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದು ಹೀಗೆ..

ಸಿದ್ದರಾಮಯ್ಯ ವಿರುದ್ದ ಮತ್ತೆ ಗುಡುಗು:  ರಾಜೀನಾಮೆ ವಾಪಸ್ ಕುರಿತು ಹೆಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದು ಹೀಗೆ..

ಬೆಂಗಳೂರು,ಜೂ,18,2019(www.justkannada.in): ಗಣಿ ಲೂಟಿ ಹಣವನ್ನ ವಾಪಸ್ ತರುವುದಾಗಿ ಹೇಳಿ ತೊಡೆ ತಟ್ಟಿ 350 ಕಿ.ಲೋ. ಮೀಟರ್ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಇದೀಗ ಜಿಂದಾಲ್ ವಿಚಾರದಲ್ಲಿ ಏಕೆ ಮೌನವಾಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ವಿಶ್ವನಾಥ್, ‘ಜಿಂದಾಲ್ ವಿಚಾರದಲ್ಲಿ ಸಿದ್ದರಾಮಯ್ಯ ಏಕೆ ಮೌನವಾಗಿದ್ದಾರೆ?. ತೊಡೆ ತಟ್ಟಿ 350 ಕಿ.ಲೋ. ಮೀಟರ್ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಈಗ ಏನು ಮಾಡುತ್ತಿದ್ದಾರೆ. ಪಾದಯಾತ್ರೆ ಮಾಡಿ ಗಣಿ ಲೂಟಿ ಹಣ ವಾಪಸ್ ತರುವುದಾಗಿ ಹೇಳಿದ್ರಿ. ಆದರೆ  ನೀವು ಸಿಎಂ ಆಗಿದ್ದಾಗ ಬೊಕ್ಕಸಕ್ಕೆ ಒಂದು ರುಪಾಯಿ ತರಲಿಲ್ಲ. ಈಗ ಜಿಂದಾಲ್ ಕುರಿತು ಮೌನವಹಿಸಿದ್ದಾರೆ ಎಂದು ಗುಡುಗಿದರು.

ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ತಮ್ಮ ಕೆಲಸವನ್ನೇ ಅವರು ಮರೆತಿದ್ದಾರೆ’ ‘ಸಿದ್ದರಾಮಯ್ಯ ಅವರು ಈ ಸರ್ಕಾರದಲ್ಲಿ ಮಂತ್ರಿಗಳ ಮಂತ್ರಿ. ಅದು ಹೇಗೆ ನೀವು ಸರ್ಕಾರದ ಭಾಗವಲ್ಲ ಎಂದು ಹೇಳುತ್ತೀರಿ. ಅಂದು ತೊಡೆ ತಟ್ಟಿದವರಿಗೆ ಇಂದು ಏನಾಯಿತು?. ಸಿದ್ದರಾಮಯ್ಯ ಅವರೇ ಈಗಲಾದರೂ ಜಿಂದಾಲ್ ಬಗ್ಗೆ ಮಾತನಾಡಿ’ ಎಂದು ಎಚ್.ವಿಶ್ವನಾಥ್ ಒತ್ತಾಯಿಸಿದರು.

ರಾಜೀನಾಮೆ ವಿಚಾರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ..

ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ವಾಪಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ‘ನನ್ನ ನಿರ್ಧಾರದಿಂದ ವಾಪಸ್ ಬರುವ ಪ್ರಶ್ನೆ ಇಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯೋಲ್ಲಾ, ದೇವೇಗೌಡರಿಗೆ ರಾಜೀನಾಮೆ ಅಂಗೀಕಾರ ಮಾಡುವಂತೆ ಇಂದು ಮನವಿ ಮಾಡುತ್ತೇನೆ’ ಎಂದು ತಿಳಿಸಿದರು.

Key words: Resignation does not return-H. Vishwanath

#Siddaramaiah #hvishwanath  #jindal #Resignation  #jds