Tuesday, August 11, 2026

BDA Apartments

Home Front Page ಅತೃಪ್ತರ ಶಾಸಕರ ರಾಜೀನಾಮೆ ವಿಚಾರ: ಪರಿಶೀಲನೆ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ..?

ಅತೃಪ್ತರ ಶಾಸಕರ ರಾಜೀನಾಮೆ ವಿಚಾರ: ಪರಿಶೀಲನೆ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ..?

ಬೆಂಗಳೂರು,ಜು,9,2019(www.justkannada.in):   ನಮ್ಮ ಕಚೇರಿಗೆ ಬಂದು ಶಾಸಕರು ರಾಜೀನಾಮೆ ನೀಡಿದ್ದಾರೆ. ಕಚೇರಿಗೆ ತೆರಳಿದ ನಂತರ ರಾಜೀನಾಮೆ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ಇಂದು ಈ ಬಗ್ಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಶಾಸಕರ ರಾಜೀನಾಮೆ ಬಗ್ಗೆ ಸಾರ್ವಜನಿಕರ ದೂರು ಆಲಿಸುತ್ತೇನೆ.  ಮತದಾರರ ಅಭಿಪ್ರಾಯವನ್ನು ಸ್ವೀಕರಿಸುತ್ತೇನೆ.  ಶಾಸಕರು ನಮ್ಮ ಕಚೇರಿ ಸಿಬ್ಬಂದಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಕಚೇರಿಗೆ ಹೋಗಿ ಪರಿಶೀಲಿಸುತ್ತೇನೆ ಎಂದರು.

ಇನ್ನು ನನ್ನನ್ನ ಭೇಟಿ ಮಾಡಲು ಯಾರೂ ಸಹ ಸಮಯ ಕೇಳಿಲ್ಲ.  ಕಾಂಗ್ರೆಸ್ ಪಕ್ಷದಿಂದ ಯಾವುದೇ ದೂರು ಸಹ ಬಂದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.

Key words: Resignation -dissatisfied MLAs- Speaker -Ramesh Kumar