ವಸತಿ ಶಾಲೆಗಳ ಶೈಕ್ಷಣಿಕ ಪದ್ದತಿಯು ಖ್ಯಾತಿಗಳಿಸಿದ್ದು, ದೇಶದ ಗಮನಸೆಳೆದಿದೆ : ಡಿಸಿಎಂ ಗೋವಿಂದ ಎಂ ಕಾರಜೋಳ

ದಾವಣಗೆರೆ, ಸೆಪ್ಟೆಂಬರ್, 13, 2020(www.justkannada.in) : ವಿದ್ಯಾರ್ಥಿಗಳಿಗೆ  ಗುಣಾತ್ಮಕ ಶಿಕ್ಷಣದೊಂದಿಗೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆಗಳ ಶೈಕ್ಷಣಿಕ ಪದ್ದತಿಯು ಖ್ಯಾತಿಗಳಿಸಿದ್ದು, ದೇಶದ ಗಮನಸೆಳೆದಿದೆ ಎಂದು ಡಿಸಿಎಂ ಗೋವಿಂದ ಎಂ ಕಾರಜೋಳ ತಿಳಿಸಿದರು.

jk-logo-justkannada-logo

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಯಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಶಿಕ್ಷಣ, ಪರಿಶಿಷ್ಟರ ಕಲ್ಯಾಣ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ರಾಜ್ಯದಲ್ಲಿ 824 ವಸತಿ ಶಾಲೆಗಳಲ್ಲೂ ಅತ್ಯುತ್ತಮವಾದ ಶಿಕ್ಷಣ ನೀಡಿ, ಕಳೆದ ಎಸ್ಎಸ್ ಎಲ್ ಸಿ ಮತ್ತು ಪಿಯುಸಿ  ಪರೀಕ್ಷೆಯಲ್ಲಿ ಅತ್ಯುತ್ತಮ ವಾದ ಫಲಿತಾಂಶ ಪಡೆದಿವೆ ಎಂದರು.

Residential,schools,notorious,country,noted,DCM Govinda M Karajola

ಈ‌ ವಸತಿ ಶಿಕ್ಷಣ ‌ಪದ್ದತಿಯು ದೇಶದ ಗಮನಸೆಳೆದು ನೂತನ ಶಿಕ್ಷಣ ನೀತಿಯಲ್ಲೂ ಉಲ್ಲೇಖಿಸಿ, ಇದೇ ಮಾದರಿಯಲ್ಲಿ ಇತರ ರಾಜ್ಯಗಳಲ್ಲಿ ಪ್ರಾರಂಭಿಸಲು ಕ್ರಮಕೈಗೊಳ್ಳುವಂತೆ ಪ್ರಸ್ತಾಪಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ 59 ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ  ಲೋಕೋಪಯೋಗಿ ಇಲಾಖೆಯ ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆಯ ಅನುದಾನದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ  25ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಸಚಿವ ಬಿ.ಎ.ಬಸವರಾಜ್, ಸಂಸದ ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ  ರೇಣುಕಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

key words : Residential-schools-notorious-country-noted-DCM Govinda M Karajola