Monday, September 28, 2026

BDA Apartments

ಮೀಸಲಾತಿಗಾಗಿ ಸಿಎಂ ಬಿಎಸ್ ವೈಗೆ ಹಿಂಸೆ: ಅವರನ್ನ ನೋಡಿದ್ರೆ ಅಯ್ಯೋ ಅನ್ನಿಸುತ...
Home Front Page ಮೀಸಲಾತಿಗಾಗಿ ಸಿಎಂ ಬಿಎಸ್ ವೈಗೆ ಹಿಂಸೆ: ಅವರನ್ನ ನೋಡಿದ್ರೆ ಅಯ್ಯೋ ಅನ್ನಿಸುತ್ತೆ- ಮನವಿ ಸ್ವೀಕರಿಸಿ ಪರಮಶಿವಯ್ಯ...

ಮೀಸಲಾತಿಗಾಗಿ ಸಿಎಂ ಬಿಎಸ್ ವೈಗೆ ಹಿಂಸೆ: ಅವರನ್ನ ನೋಡಿದ್ರೆ ಅಯ್ಯೋ ಅನ್ನಿಸುತ್ತೆ- ಮನವಿ ಸ್ವೀಕರಿಸಿ ಪರಮಶಿವಯ್ಯ ಬೇಸರ…

ಬೆಂಗಳೂರು,ಫೆಬ್ರವರಿ,13,2021(www.justkannada.in):  ಮೀಸಲಾತಿಗಾಗಿ ಸಿಎಂ ಬಿಎಸ್ ಯಡಿಯೂರಪ್ಪಗೆ ಹಿಂಸೆ ನೀಡಲಾಗುತ್ತಿದೆ. ಸಿಎಂರನ್ನ ನೋಡಿದರೇ ಅಯ್ಯೋ ಅನ್ನಿಸುತ್ತದೆ ಎಂದು ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ಪರಮಶಿವಯ್ಯ ಬೇಸರ ವ್ಯಕ್ತಪಡಿಸಿದರು.jk

ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ವೀರಶೈವ ಲಿಂಗಾಯಿತ ಶ್ರೀಗಳ ಸಭೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಪರಮಶಿವಯ್ಯ, ಎಸ್.ಟಿ ಮೀಸಲಾತಿಗಾಗಿ ಒಂದು ಕಡೆ ಕುರುಬರು, ಇನ್ನೊಂದೆಡೆ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ, ವಿರಶೈವ ಲಿಂಗಾಯಿತ ಸಮುದಾಯ ಹೀಗೆ ಮೀಸಲಾತಿಗಾಗಿ ಸಿಎಂ ಬಿಎಸ್ ವೈಗೆ ಹಿಂಸೆ ನೀಡಲಾಗುತ್ತಿದೆ. ಪಾಪ ಸಿಎಂ ಬಿಎಸ್ ವೈ ಅವರನ್ನ ನೋಡಿದ್ರೆ ಅಯ್ಯೋ ಅನ್ನಿಸುತ್ತದೆ. ಸಿಎಂ ಹುದ್ದೆ ಮುಳ್ಳಿನ ಹಾಸಿಗೆ ಎಂದರು.

ಹಾಗೆಯೇ ಸಿಎಂ ಬಿಎಸ್ ವೈ ಬಜೆಟ್ ಕಾರ್ಯದಲ್ಲಿ ತೊಡಗಿದ್ದಾರೆ. ಫೆಬ್ರವರಿ 19ಕ್ಕೆ ಮನವಿ ತರಲಿ ಎಂದಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಮೈಸೂರಿಗೆ ತೆರಳಿದ ಹಿನ್ನೆಲೆಯಲ್ಲಿ ನಾನು ಮನವಿ ಸ್ವೀಕರಿಸಿದ್ದೇನೆ ಎಂದರು.

Key words: reservation-panchamasali-community- virashaiva lingayatha-paramashivaiah