ಸಿಎಂ ಒಪ್ಪಲೇಬೇಕು: ಮಧ್ಯಾಹ್ನದೊಳಗೆ ಮೀಸಲಾತಿ ಬೇಡಿಕೆ ಈಡೇರದಿದ್ದರೇ ವಿಧಾನಸೌಧಕ್ಕೆ ಮುತ್ತಿಗೆ-  ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ…

ಬೆಂಗಳೂರು,ಫೆಬ್ರವರಿ,21,2021(www.justkannada.in): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲೇಬೇಕು. ಮಧ್ಯಾಹ್ನದೊಳಗೆ ಸಿಎಂ ಒಪ್ಪಲೇಬೇಕು. ಒಪ್ಪದಿದ್ದರೇ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

2ಎ ಮೀಸಲಾತಿಗಾಗಿ ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾವೇಶ ಹಮ್ಮಿಕೊಂಡಿದ್ದು ಸಾವಿರಾರು ಮಂದಿ ಆಗಮಿಸಿದ್ದಾರೆ. ಈ ಕುರಿತು ಮಾತನಾಡಿರುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಮಧ್ಯಾಹ್ನದೊಳಗೆ ಬೇಡಿಕೆ ಈಡೇರದಿದ್ದರೇ ವಿದಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಮಧ್ಯಾಹ್ನದೊಳಗೆ ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಲೇಬೇಕು. ಒಪ್ಪಿಕೊಳ್ಳದೇ ಇದ್ದರೇ ವಿಧಾನಸೌಧದ ಮುಂದೆ ಧರಣಿ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. reservation –pachamasali community-Basava mruthyunjaya Swamiji -warns

ಮಧ್ಯಾಹ್ನ 2 ಗಂಟೆಯೊಳಗೆ ಒಪ್ಪದಿದ್ರೆ ಉಗ್ರ ಹೋರಾಟ ಮಾಡಲಾಗುತ್ತದೆ. ಮೀಸಲಾತಿ ಸಿಗುವವರೆಗೂ ಬೆಂಗಳೂರು ಬಿಟ್ಟು ಹೋಗಲ್ಲ. ಮಾರ್ಚ್ 4 ರ ನಂತರ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಹೇಳಿದ್ದಾರೆ.

Key words:    reservation –pachamasali community-Basava mruthyunjaya Swamiji -warns