“ನನ್ನ ಸೋಲಿಸಿದ್ದು ಜನರಲ್ಲ, ಬಿಜೆಪಿ ನಾಯಕರೇ ನನ್ನನ್ನು ಸೋಲಿಸಿದರು” : ಸಚಿವ ಶ್ರೀರಾಮುಲು

ಬೆಂಗಳೂರು,ಫೆಬ್ರವರಿ,21,2021(www.justkannada.in) : ಬಾದಾಮಿ ಕ್ಷೇತ್ರದಲ್ಲಿ ನನ್ನ ಸೋಲಿಸಿದ್ದು ಜನರಲ್ಲ, ಬಿಜೆಪಿ ನಾಯಕರೇ ನನ್ನನ್ನು ಸೋಲಿಸಿದರು ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

jk

ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀರಾಮುಲು, ಮೋದಿ, ಅಮಿತ್ ಶಾ ಅಂತಹವರು ಮಾತ್ರ ಎರಡು ಕಡೆ ಸ್ಪರ್ಧೆ ಮಾಡುತ್ತಾರೆ. ಶ್ರೀರಾಮುಲು ವಾಲ್ಮೀಕಿ ನಾಯಕ ಸಮಾಜದ ಸಣ್ಣ ಕುಲದವನು. ಶ್ರೀರಾಮುಲು ಗೆದ್ದರೆ ನಮಗೆ ಮುಳ್ಳು ಆಗ್ತಾನೆಂದು ಬಿಜೆಪಿಯವರೇ ನನ್ನನ್ನು ಸೋಲಿಸಿದರು ಎಂದಿದ್ದಾರೆ.

ಬಾದಾಮಿಯಲ್ಲಿ ಸೋತ ವೇಳೆ ಮೊಳಕಾಲ್ಮೂರು ಜನ ಕೈಹಿಡಿದರು

My-Defeated-Not-people-BJP Leaders-Me Defeated-Minister-Sriramulu

ಬಾದಾಮಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎದುರು 1400 ಅಲ್ಪ ಮತಗಳಿಂದ ಸೋತಿದ್ದೇನೆ. ಬಾದಾಮಿಯಲ್ಲಿ ಸೋತ ವೇಳೆ ಮೊಳಕಾಲ್ಮೂರು ಜನ ಕೈಹಿಡಿದರು. 48 ಸಾವಿರ ಮತಗಳಿಂದ ಗೆಲ್ಲಿಸಿದ್ದನ್ನು ನಾನು ಮರೆಯುವುದಿಲ್ಲ. ನಾನು ಜೀವ ಬಿಡುತ್ತೇನೆಯೇ ಹೊರತು ನಿಮ್ಮ ವಿಶ್ವಾಸ ಕಳೆದುಕೊಳ್ಳಲ್ಲ ಎಂದು ಮೊಳಕಾಲ್ಮೂರು ಕ್ಷೇತ್ರದಜನರಿಗೆ ಶ್ರೀರಾಮುಲು ಭರವಸೆ ನೀಡಿದರು.

key words : My-Defeated-Not-people-BJP Leaders-Me Defeated-Minister-Sriramulu