Wednesday, October 7, 2026

BDA Apartments

immense respect BDA JK_Adv BDA Adv
Home Front Page ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ  ಶ್ರೀಗಳು  ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ – ಯತ್ನಾಳ್.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ  ಶ್ರೀಗಳು  ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ – ಯತ್ನಾಳ್.

ವಿಜಯಪುರ,ನವೆಂಬರ್,16,2022(www.justkannada.in): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿಸಲು ಬಸವಜಯಮೃತ್ಯುಂಜಯ ಸ್ವಾಮೀಜಿಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ವಿಜಯಪುರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಸವ ಜಯಮೃತ್ಯುಂಜಯ ಶ್ರೀಗಳು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಹೋರಾಟ ಮಾಡುತ್ತಿದ್ದಾರೆ.  ಪಂಚಮಸಾಲಿ ಸಮುದಾಯದ ಇತರೇ ಸ್ವಾಮಿಗಳು ಬುಕ್ಕಿಂಗ್ ಸ್ವಾಮೀಜಿಗಳು.  ಉಳಿದವರು ಫೈವ್ ಸ್ಟಾರ್ ಹೋಟೆಲ್ ನಂತೆ ಮಠ ಕಟ್ಟಿಕೊಂಡಿದ್ದಾರೆ.

ಈಗ ಪಂಚಮಸಾಲಿಗೆ ಮೀಸಲಾತಿ ಸಿಗುತ್ತೆ ಎಂದು ಗೊತ್ತಾಗಿದೆ.  ಇದನ್ನಯ ತಿಳಿದು ನಮಗಿನ್ನು  ಉಳಿಗಾಲವಿಲ್ಲ ಎಂದು ಈಗ ಸಮಾಜದ ಬಗ್ಗೆ ಮಾತನಾಡುತ್ತಿದ್ದಾರೆ. ಓಡಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಸಭೆ ನಡೆಸಲು ಮುಂದಾಗಿದ್ದಾರೆ.  ನಿಮ್ಮೊಳಗೆ ನರನಾಡಿ ಎಷ್ಟಿದೆ ಎಂದು ನಮ್ಮ ಹುಡುಗರಿಗೆ ಗೊತ್ತಿದೆ ಎಂದು ಯತ್ನಾಳ್ ತಿಳಿಸಿದರು.

Key words:  reservation – 2A – Panchmasali community-Basanagowada patil Yatnal.