Thursday, August 20, 2026

BDA Apartments

Home Front Page ನಾಳೆ ಗಣರಾಜ್ಯೋತ್ಸವ ಸಂಭ್ರಮ:  ರಾಜ್ಯದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ.

ನಾಳೆ ಗಣರಾಜ್ಯೋತ್ಸವ ಸಂಭ್ರಮ:  ರಾಜ್ಯದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ.

ಬೆಂಗಳೂರು ,ಜನವರಿ,25,2024(www.justkannada.in):  ನಾಳೆ ಗಣರಾಜ್ಯೋತ್ಸವ  ಸಂಭ್ರಮವಾಗಿದ್ದು ರಾಷ್ಟಪತಿ ಪದಕ ಘೋಷಣೆ ಮಾಡಲಾಗಿದೆ. ಕರ್ನಾಟಕದ 21 ಅಧಿಕಾರಿಗಳಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಲಭಿಸಿದೆ.

ಎಡಿಜಿಪಿ ಸೌಮೇಂದು ಮುಖರ್ಜಿ, ಡಿವೈಎಸ್ ಪಿ ಸುಧೀರ್ ಹೆಗ್ಡೆ ಅವರಿಗೆ ರಾಷ್ಟ್ರಪತಿಗಳ ಪ್ರಶಂಸನೀಯ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೇ ಐಜಿಪಿ ರಮಣ್ ಗುಪ್ತಾ, ಐಜಿಪಿ ಪ್ರವೀಣ್ ಮಧುಕರ್ ಸೇರಿದಂತೆ ಕರ್ನಾಟಕದ 21 ಜನರ ಪಟ್ಟಿ ಬಿಡುಗಡೆಯಾಗಿದೆ.   ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳು ನೀಡಲಿದ್ದಾರೆ.

ಪೊಲೀಸ್​ ಇನ್ಸ್​​ಪೆಕ್ಟರ್​ ಮಾಸ್ತೇನಹಳ್ಳಿ ರಾಮಪ್ಪ ಹರೀಶ್, ಇನ್ಸ್​​ಪೆಕ್ಟರ್ ಸಣ್ಣ ರಂಗಪ್ಪ ವಿರೇಂದ್ರ ಪ್ರಸಾದ್, ಸಬ್​ ಇನ್ಸ್​​ಪೆಕ್ಟರ್ ದಾದಾಪೀರ್ ಕಣ್ಣೂರ್ ಸಾಬ್, ವೈರಲೆಸ್ ಎಎಸ್​ಐ​ ಸುರೇಶ್ ರಾಮಪ್ಪ ಪುಂಡಲಿಕಟ್ಟಿ, ಎಎಸ್ಐ ರಾಮ ಸೇರಿ 21 ಮಂದಿ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಪ್ರಕಟವಾಗಿದೆ.

Key words: Republic Day-celebrations- President’s Medal – 21 police officers – state.