Wednesday, August 5, 2026

BDA Apartments

Home Front Page ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರಲ್ಲ ಎಂದು ವರದಿ ಬಂದಿದೆ- ಗೃಹ ಸಚಿವ ಅರಗ ಜ್ಞಾನೇಂದ್ರ.

ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರಲ್ಲ ಎಂದು ವರದಿ ಬಂದಿದೆ- ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ಫೆಬ್ರವರಿ,14,2023(www.justkannada.in): ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರಲ್ಲ ಔಷಧಿ ಗುಣ ದೆ ಎಂದು ವರದಿ ನೀಡಲಾಗಿದೆ  ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ವಿಧಾನಪರಿಷತ್ ನಲ್ಲಿ ಇಂದು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಒಂದು ವರ್ಷದ ಹಿಂದೆ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇದೆಯೇ ಎಂಬ ಬಗ್ಗೆ ಸಂಶೋಧನೆ ನಡೆಸಲು ಹೇಳಿದ್ದವು . ಸಂಶೋದನೆ ನಡೆಸಲು ರಾಮಯ್ಯ ತಾಂತ್ರಿಕವಿವಿಗೆ ಹೇಳಿದ್ದವು . ತಾಂತ್ರಿಕ ವಿವಿ ಸಂಶೋಧನಾ ವರದಿ ನೀಡಿದೆ.

ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಇರಲ್ಲ ಔಷಧಿ ಇರುತ್ತೆ ಎಂದು ವರದಿ ಸಲ್ಲಿಕೆ ಮಾಡಿದೆ. ಆದರೆ ಹಿಂದಿನ ಸರ್ಕಾರ ಅಡಿಕೆಯಲ್ಲಿ ಕ್ಯಾನ್ಸರ್ ಗುಣ ಇದೆ ಎಂದಿತ್ತು . ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದೆ. ನಾವು ಸುಪ್ರೀಂಕೋರ್ಟ್ ಗೆ ಹೋಗುತ್ತೇವೆ ಎಂದು ಅರಗ ಜ್ಞಾನೇಂದ್ರ ಹೇಳಿದರು.

Key words: report- no carcinogenic-elements – betelnut -Home Minister- Araga jnanendra.