ಮಾಧ್ಯಮಗಳು ದರ್ಶನ್ ಅವರೇ ಅಪರಾಧಿ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ- ನಟ ಜಯಪ್ರಕಾಶ್

ಮೈಸೂರು,ಜೂನ್,14,2024 (www.justkannada.in): ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಂಬಂಧ ಮಾಧ್ಯಮಗಳು ನಟ  ದರ್ಶನ್ ಅವರೇ ಅಪರಾಧಿ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ ಎಂದು  ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ, ನಟ ನಟ ಜಯಪ್ರಕಾಶ್ ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಜಯಪ್ರಕಾಶ್,  ದರ್ಶನ್ ಅವರು ಈಗ ಆರೋಪಿ ಅಷ್ಟೇ ಅಪರಾಧಿಯಲ್ಲ. ದರ್ಶನ್ ಅವರು ಈ‌ ಪ್ರಕರಣದಲ್ಲಿ  ಭಾಗಿಯಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಮೀಡಿಯಾಗಳೂ ದರ್ಶನ್ ಅವರೇ ಅಪರಾಧಿ ಎಂಬಂತೆ ಬಿಂಬಿಸುತ್ತವೆ. ಇದು ಸರಿಯಲ್ಲ ಎಂದರು.

ಕಾನೂನಾತ್ಮಕ ತನಿಖೆ ನಡೆದು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲಿ. ಯಾವುದೇ ಒಂದು ಜೀವ ತಗೆಯುವ ಹಕ್ಕು ಯಾರಿಗೂ ಇಲ್ಲ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ನೀಡಲಿ. ದರ್ಶನ್ ಅವರ ಮೇಲೆ ಚಲನ‌ಚಿತ್ರ  ವಾಣಿಜ್ಯ ಮಂಡಳಿ ನಿಷೇಧ ಹೇರುವ ನಿರ್ಧಾರ ಕೈ ಬಿಟ್ಟಿದ್ದಾರೆ ಅದು ಸ್ವಾಗತಾರ್ಹ ಎಂದರು.

Key words: Renukaswamy, murder, case, Darshan, Jayaprakash