ಬೆಂಗಳೂರು,ನವೆಂಬರ್,3,2025 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳನ್ನ ಬೆಂಗಳೂರಿನ 64ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು ದೋಷಾರೋಪ ನಿಗದಿ ಮಾಡಿದ್ದಾರೆ.
ಪ್ರಕರಣ ಸಂಬಂಧ ದೋಷಾರೋಪ ನಿಗದಿಗಾಗಿ 64ನೇ ಸಿಸಿಎಚ್ ನ್ಯಾಯಾಲಯಕ್ಕೆ 17 ಆರೋಪಿಗಳನ್ನ ಪೊಲೀಸರು ಹಾಜರುಪಡಿಸಿಲಾಗಿತ್ತು. ಮೊದಲು ಆರೋಪಿ ನಂ.1 ಪವಿತ್ರಾಗೌಡ 2ನೇ ಆರೋಪಿ ನಟ ದರ್ಶನ್ ಸೇರಿ 17 ಆರೋಪಿಗಳ ಮೇಲೆ ನ್ಯಾಯಾಧೀಶರು ದೋಷಾರೋಪ ನಿಗದಿಪಡಿಸಿದ್ದಾರೆ.
ಪವಿತ್ರಾಗೌಡಗೆ ಬಂದ ಮೆಸೇಜ್, ಅಕ್ರಮಕೂಟ ಒಳಸಂಚು ಕಿಡ್ನಾಪ್ ಮಾಡಿರುವ ಬಗ್ಗೆ ನ್ಯಾಯಾಧೀಶರು ಸಾರಾಂಶ ಓದಿದರು. ದೋಷಾರೋಪವನ್ನ ಎಲ್ಲಾ ಆರೋಪಿಗಳು ನಿರಾಕರಿಸಿದ್ದಾರೆ. ವಿಚಾರಣೆಯನ್ನ ನ್ಯಾಯಾಲಯ ನವೆಂಬರ್ 10ಕ್ಕೆ ಮುಂದೂಡಿಕೆ ಮಾಡಿದೆ.
Key words: Renukaswamy murder case, Actor, Darshan , accused,







