Sunday, August 9, 2026

BDA Apartments

Home Cinema  “ಅಮಾಯಕ “ ಅಲ್ಲ ಈ ರೇಣುಕಾ : ಚಾರ್ಜ್‌ ಶೀಟ್‌ ನಲ್ಲಿ ಸತ್ಯ “ದರ್ಶನ”..!

 “ಅಮಾಯಕ “ ಅಲ್ಲ ಈ ರೇಣುಕಾ : ಚಾರ್ಜ್‌ ಶೀಟ್‌ ನಲ್ಲಿ ಸತ್ಯ “ದರ್ಶನ”..!

Renuka swamy is not "innocent":  chargesheet reveals the truth

 

ಬೆಂಗಳೂರು, ಸೆ.06,2024: (www.justkannada.in news) ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಹತ್ಯೆಗೀಡಾದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಹಾಗೂ ಇತರರ ವಿರುದ್ಧ ಪೊಲೀಸರು ಸುದೀರ್ಘ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ. ಇದರಲ್ಲಿ ಮೃತ ರೇಣುಕಾಸ್ವಾಮಿಯ ಕೃತ್ಯದ ಬಗೆಗೂ ಸಾಕಷ್ಟು ಸಾಕ್ಷ್ಯಗಳು ಲಭಿಸಿದ್ದು ಅವನ್ನು ಕೋರ್ಟ್‌ ಗೆ ಸಲ್ಲಿಸಲಾಗಿದೆ.

ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿಯೇ ರೇಣುಕಾಸ್ವಾಮಿಯ ಹತ್ಯೆ ನಡೆದಿದೆ ಎಂಬುದು ಚಾರ್ಜ್‌ ಶೀಟ್‌ ನಲ್ಲಿ ಪ್ರಸ್ತಾಪಿಸಲಾಗಿದೆ. ಜತೆಗೆ ಆತ ತನ್ನ ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಮ್ಮಿ ಎಂಬ ಸಂದೇಶ ಕಳುಹಿಸಿದ್ದ ಎಂಬುದಾಗಿ ಪವಿತ್ರಾ ಗೌಡ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಒಟ್ಟು 13 ಮಂದಿ ಬಂಧನವಾಗಿದೆ. ದರ್ಶನ್‌ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯ ಹತ್ಯೆ ನಡೆದಿದೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ, ದರ್ಶನ್‌ ಮತ್ತವರ ಸಹಚರರು ಸೇರಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಕೊಲೆಯಾದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಸಾಕಷ್ಟು ಕಾಮೆಂಟ್  ಮಾಡಿದ್ದ ಎಂಬುದು ತನಿಖೆ ವೇಳೆ ದೃಢಪಟ್ಟಿದೆ. ಜತೆಗೆ ಈಗ ತನ್ನ ಖಾಸಗಿ ಫೋಟೋಗಳನ್ನೂ ಸಹ ಪವಿತ್ರಾಗೆ ಕಳಿಸುತ್ತಿದ್ದ. ಫೆ. 27ರಿಂದ ಪವಿತ್ರಾ ಗೌಡಗೆ ಅಶ್ಲೀಲ ಮೆಸೆಜ್‌ಗಳನ್ನು ಕಳುಹಿಸಲು ಶುರು ಮಾಡಿದ್ದ ರೇಣುಕಾಸ್ವಾಮಿ. ಒಂದಾದ ಮೇಲೊಂದು ಕೆಟ್ಟ ಕೆಟ್ಟ ಸಂದೇಶ ಕಳುಹಿಸಿದ್ದಕ್ಕೆ, ಆತನ ಖಾತೆಯನ್ನೇ ಪವಿತ್ರಾ ಬ್ಲಾಕ್‌ ಮಾಡಿದ್ದರು.  ಆದರೆ ಇದಕ್ಕೂ ಬಗ್ಗದ ರೇಣುಕಾಸ್ವಾಮಿ, ಬೇರೆ ಬೇರೆ ಅಕೌಂಟ್‌ನಿಂದ ಮತ್ತಷ್ಟು ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದ.

 ಗುಪ್ತಾಂಗದ ಫೋಟೋ :

ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಡಿಮೆ ಬಾ ಎಂದೂ ಮೃತ ರೇಣುಕಾಸ್ವಾಮಿ ಸಂದೇಶ ಕಳಿಸಿದ್ದದ್ದು ಬಹಿರಂಗಗೊಂಡಿದೆ. ಈ ಎಲ್ಲ ಅಂಶಗಳನ್ನು ಪೊಲೀಸರು, ಪವತ್ರಗೌಡ ಮೊಬೈಲ್‌ ಫೋನ್‌ ನ ವಾಟ್ಸಾಪ್‌ ಸಂದೇಶಗಳನ್ನು ರಿಟ್ರೈವ್‌ ಮಾಡಿದ್ದು ಸಾಕ್ಷಿ ಕಲೆ ಹಾಕಿದ್ದಾರೆ.

ಮೃತ ರೇಣುಕಾಸ್ವಾಮಿ ಪವಿತ್ರಗೌಡಗೆ ಮಾತ್ರವಲ್ಲದೆ, ಸುಮಾರು 200 ಕ್ಕೂ ಹೆಚ್ಚು ಮಂದಿಗೆ ಇಂಥ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದದ್ದು ತನಿಖೆ ವೇಳೆ ಪೊಲೀಸರಿಗೆ ಪತ್ತೆಯಾಗಿದ್ದು, ಈ ಅಂಶಗಳನ್ನು ಜಾರ್ಜ್‌ ಶೀಟ್‌ ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಮೃತ ರೇಣುಕಾಸ್ವಾಮಿ ಹತ್ಯೆಗೂ ಮುನ್ನ ಕೈ ಮುಗಿದು ದೈನೇಸಿಯಾಗಿ ಪ್ರಾಣ ಭಿಕ್ಷೆ ಬೇಡುತ್ತಿರುವ ಪೋಟೋ ಬಹಿರಂಗಗೊಂಡ ಬೆನ್ನಲ್ಲೇ, ಆತನ ಅಶ್ಲೀಲ ಸಂದೇಶಗಳು ಹಾಗೂ ಫೋಟೋಗಳು ಸಹ ಬಹಿರಂಗಗೊಂಡಿದ್ದು, ಅವು ಸಾರ್ವಜನಿಕವಾಗಿ ಪ್ರಚಾರಕ್ಕೆ ಯೋಗ್ಯವಾಗಿಲ್ಲದ ಕಾರಣ ಮಾಧ್ಯಮಗಳು ಅವನ್ನು ತೋರಿಸುತಿಲ್ಲ ಎಂಬುದನ್ನು ಖುದ್ದು ಕನ್ನಡ ವಾಹಿನಿಗಳೇ ಹೇಳಿಕೊಂಡಿವೆ.

key words:  Renuka swamy, is not, “innocent”, chargesheet, reveals, the truth