Thursday, August 6, 2026

BDA Apartments

Home Cinema ಆನೆಗುಂದಿ ಉತ್ಸವದಲ್ಲಿ ಶಾಸಕರ ರಂಪಾಟ: ವಿಜಯ ಪ್ರಕಾಶ್’ಗೆ ಎರಡೆರಡು ಬಾರಿ ಸನ್ಮಾನ !

ಆನೆಗುಂದಿ ಉತ್ಸವದಲ್ಲಿ ಶಾಸಕರ ರಂಪಾಟ: ವಿಜಯ ಪ್ರಕಾಶ್’ಗೆ ಎರಡೆರಡು ಬಾರಿ ಸನ್ಮಾನ !

ಬೆಂಗಳೂರು, ಜನವರಿ 10, 2019 (www.justkannada.in): ಆನೆಗುಂದಿ ಉತ್ಸವದಲ್ಲಿ ಶಾಸಕರ ರಂಪಾಟದಿಂದಾಗಿ ವಿಜಯ ಪ್ರಕಾಶ್’ಗೆ ಎರಡೆರಡು ಬಾರಿ ಸನ್ಮಾನ ಮಾಡಿಸಿಕೊಂಡರು !

ಸನ್ಮಾನ ಮಾಡುವ ವಿಚಾರದಲ್ಲಿ ರಾಜಕೀಯ ನಾಯಕರ ಕಿತ್ತಾಟದಲ್ಲಿ ಖ್ಯಾತ ಗಾಯಕನನ್ನು ಅವಮಾನಿಸಲಾಗಿದೆ.
ಶಾಸಕ ಮುನಳ್ಳಿ ಪರಣ್ಣ ಸನ್ಮಾನ ಮಾಡುವುದೆಂದು ನಿಗದಿಯಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಶಾಸಕರು ಬಾರದೇ ಹೋಗಿದ್ದರಿಂದ ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

ಬಳಿಕ ವಿಜಯ್ ಪ್ರಕಾಶ್ ಹಾಡಿನ ಕಾರ್ಯಕ್ರಮ ಶುರು ಮಾಡಿದ್ದರು. ಈ ವೇಳೆ ಆಗಮಿಸಿದ ಶಾಸಕ ಮುನಳ್ಳಿಗೆ ಸನ್ಮಾನ ನಡೆದಿರುವುದು ಗೊತ್ತಾಗಿ ರಂಪಾಟ ಮಾಡಿದ್ದಾರೆ.  ವಾಗ್ವಾದವನ್ನು ವೇದಿಕೆಯಿಂದಲೇ ನೋಡಿದ ವಿಜಯ್ ಪ್ರಕಾಶ್ ಶಾಸಕರ ಬಳಿ ಬಂದು ತಾವೇ ಅವರನ್ನು ಸಮಾಧಾನಿಸಿ ಎರಡನೇ ಬಾರಿ ಸನ್ಮಾನ ಮಾಡಿಸಿದರು.