Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Front Page ಗಾಂಧಿ ಕುಟುಂಬದ ಸದಸ್ಯರಿಲ್ಲದೇ ನಡೆದ ಕಾಂಗ್ರೆಸ್ ‘ಹೈ’ ಮೀಟಿಂಗ್ !

ಗಾಂಧಿ ಕುಟುಂಬದ ಸದಸ್ಯರಿಲ್ಲದೇ ನಡೆದ ಕಾಂಗ್ರೆಸ್ ‘ಹೈ’ ಮೀಟಿಂಗ್ !

ನವದೆಹಲಿ, ಜೂನ್ 13, 2019 (www.justkannada.in): ಮೊದಲ ಬಾರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಗೈರು ಹಾಜರಿ ನಡುವೆ ಕಾಂಗ್ರೆಸ್ ಹಿರಿಯ ನಾಯಕರು ಸಭೆ ನಡೆಸಿದ್ದಾರೆ.

ಬುಧವಾರ ಕೈ ನಾಯಕರ ಸಭೆ ನಿಗದಿಯಾಗಿತ್ತಾದರೂ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ರಾಯ್ಬರೇಲಿಗೆ ತೆರಳಿದ್ದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ರಾಹುಲ್ ಗಾಂಧಿ ವೈಯಕ್ತಿಕ ಕಾರಣಗಳಿಂದ ಸಭೆಗೆ ಹಾಜರಾಗಿರಲಿಲ್ಲ.

ಹೀಗಾಗಿ ಮೊದಲ ಬಾರಿಗೆ ಗಾಂಧಿ ಕುಟುಂಬದ ಸದಸ್ಯರು ಇಲ್ಲದೇ ಸಭೆ ನಡೆಯಿತು. ಇನ್ನು ಸಭೆಯಲ್ಲಿ, ಅಧ್ಯಕ್ಷ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂಬ ಮಾತಿಗೆ ಎಲ್ಲ ನಾಯಕರೂ ಒಕ್ಕೊರಲಿನಿಂದ ತಲೆಯಾಡಿಸಿದರು ಎನ್ನಲಾಗಿದೆ.