ಕ್ರಿಕೆಟ್: ಲೀಡ್ಸ್’ನಲ್ಲೂ ಟೀಂ ಇಂಡಿಯಾ ಕಾಡಲಿದೆಯೇ ಮಳೆ ?!

ಬೆಂಗಳೂರು, ಆಗಸ್ಟ್ 25, 2021 (www.justkannada.in): ಭಾರತ-ಇಂಗ್ಲೆಂಡ್ 3ನೇ ಟೆಸ್ಟ್’ನಲ್ಲೂ ವರುಣನ ಅವಕೃಪೆ ಕಾಡುವ ಸಾಧ್ಯತೆ ಇದೆ.

ಈ ಪಂದ್ಯದಲ್ಲೂ ಮೊದಲ ದಿನ ಮೋಡ ಕವಿದ ವಾತಾವರಣವಿರಲಿದ್ದು, ಸಣ್ಣ ಮಳೆ ಬೀಳುವ ಸಾಧ್ಯತೆ ಇದೆ. ಕೆಲ ಹೊತ್ತು ಕಳೆದಂತೆ ಸೂರ್ಯನ ದರ್ಶನವಾಗಬಹುದು. ಹೀಗಾಗಿ ಪಂದ್ಯಕ್ಕೆ ಹಾನಿಯಾಗದು ಎನ್ನಲಾಗಿದೆ.

ಮೊದಲ ಪಂದ್ಯ ಮಳೆಯಿಂದಾಗಿ ಅಂತಿಮ ದಿನ ರದ್ದಾಗಿತ್ತು. ಎರಡನೇ ಪಂದ್ಯದಲ್ಲೂ ಮೊದಲ ದಿನವೇ ಮಳೆ ಕೊಂಚ ಹೊತ್ತು ಪಂದ್ಯಕ್ಕೆ ಅಡ್ಡಿಯಾಗಿತ್ತು. ಆದರೆ ಲೀಡ್ಸ್ ನಲ್ಲಿ ಮಳೆ ಕಾಟ ಅಷ್ಟಾಗಿ ಕಾಡದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.