ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿ: ಮೈಸೂರಿನಲ್ಲಿ ವಾಟಾಳ್ ನಾಗರಾಜು ಹಾಗೂ ಕಾರ್ಯಕರ್ತರಿಂದ ಪ್ರತಿಭಟನೆ….

ಮೈಸೂರು,ಆ,11,2019(www.justkannada.in): ಕರ್ನಾಟಕ ರಾಜ್ಯದಾಧ್ಯಂತ ಹಿಂದೆಂದೂ ಕಾಣದ ಭೀಕರ ಜಲಪ್ರಳಯ ಉಂಟಾಗಿದೆ..ಮೈಸೂರು & ಚಾಮರಾಜನಗರ ಜಿಲ್ಲೆ ಜನರು ಪ್ರವಾಹದಿಂದ ತತ್ತರಿಸಿದ್ದಾರೆ.ತಕ್ಷಣವೇ ಸಮಾರೋಪಾದಿಯಲ್ಲಿ ನೆರವು ನೀಡಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ರೈಲ್ವೆ ನಿಲ್ದಾಣದ ಬಳಿ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜು ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯಮಟ್ಟದ ಸಮಿತಿ ನೇಮಕವಾಗಬೇಕು. ಶೀಘ್ರವಾಗಿ ಮಂತ್ರಿ ಮಂಡಳ ರಚನೆ ಆಗಲೇ ಬೇಕು. ನೆರೆಹಾವಳಿಯಿಂದ ಮೃತಪಟ್ಟವರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರವಾಹದಿಂದ ಬಹುತೇಕ ಉತ್ತರ ಕರ್ನಾಟಕದ ಜಿಲ್ಲೆಗಳು ಮಳೆಯಿಂದ ಮುಳುಗಿ ಹೋಗಿವೆ. ಹೀಗಾಗಿ ಮಾನ್ಯ ಪ್ರಧಾನಿಗಳು ಕರ್ನಾಟಕ ರಾಜ್ಯಕ್ಕೆ ಬಂದು ಪರಿಸ್ಥಿತಿ ಅವಲೋಕಿಸಬೇಕು. ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು.  ಈ ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಿಪಡಿಸಬಾರದು ಎಂದು ಒತ್ತಾಯಿಸಿದರು.

Key words: relief -neighboring victims-Vatal Nagaraju – activists- protest – Mysore